ಅಚ್ಚಬಿಳಿ ಹಗಲು ಕಣ್ಕುಕ್ಕಿತಂತೆ
ಕತ್ತಲರಸುತ ನೆಲಕಿಳಿದಿದೆ ನಕ್ಷತ್ರಸಂತೆ!
ತೊಲೆಯ ತೊಟ್ಟಿಲಿಂದ
ಚಂದ್ರತಾರೆ ಉಯ್ಯಾಲೆವರೆಗೆ
ಬೆಳಕಿಟ್ಟೇ ತೂಗಿದಾಕೆ ನನ ತಂಗಿ
ಸೆರಗ ಗಂಟಲಿ ಕತ್ತಲೂ ಒಂದಷ್ಟು
ಬಚ್ಚಿಟ್ಟಿದ್ದಾಳಂತೆ ನುಂಗಿ ನುಂಗಿ !
ತಕ್ಕ ಹೊತ್ತಿದೋ ಅನುತ
ಬಿಚ್ಚಿ ಗಂಟು
ಹರವಿ ಸೆರಗು
ಹಾದಿ ತೋರುತಾಳೆ ನಕ್ಷತ್ರಗಳಿಗೆ
ಅಡಗಿದ್ದ ಕಡುಕತ್ತಲೆಯೆಡೆಗೆ!
ಮಿನುಗುನಗೆಗುಚ್ಚ ತಂದೆದುರಿಡುತಾಳೆ
"ಕಾವಳವೆಲ್ಲೆಡೆಯೂ ಕಳವಳವಲ್ಲ ಕಣೇ..
ಗುಟ್ಟು ನೂರಲಿ ಅಕ್ಕಾ, ಅಡಕದಿಟ ಹೆಕ್ಕಬೇಕು.
ನೋಡದೋ ಕತ್ತಲಲಿತ್ತು ತಾರೆ ಕಂಗಳ ಮಿನುಗು;
ಮತ್ತದರಲಿತ್ತು ಸೆರಗ ಕತ್ತಲೆಯ ನಗು!
ಬಿಡಿಸಿಬಿಡೇ ಗಂಟು.
ಹರವಿಬಿಡೇ ಸೆರಗು.
ಬಿಚ್ಚಿಡೇ ಬಚ್ಚಿಟ್ಟ ಕತ್ತಲು.
ನಿನದರಲೂ ಒಂದಷ್ಟು ಅವು ಮಿನುಗಲಿ
ಒಂದಿಷ್ಟು ಇವು ನಕ್ಕುಬಿಡಲಿ!"
ಕತ್ತಲರಸುತ ನೆಲಕಿಳಿದಿದೆ ನಕ್ಷತ್ರಸಂತೆ!
ತೊಲೆಯ ತೊಟ್ಟಿಲಿಂದ
ಚಂದ್ರತಾರೆ ಉಯ್ಯಾಲೆವರೆಗೆ
ಬೆಳಕಿಟ್ಟೇ ತೂಗಿದಾಕೆ ನನ ತಂಗಿ
ಸೆರಗ ಗಂಟಲಿ ಕತ್ತಲೂ ಒಂದಷ್ಟು
ಬಚ್ಚಿಟ್ಟಿದ್ದಾಳಂತೆ ನುಂಗಿ ನುಂಗಿ !
ತಕ್ಕ ಹೊತ್ತಿದೋ ಅನುತ
ಬಿಚ್ಚಿ ಗಂಟು
ಹರವಿ ಸೆರಗು
ಹಾದಿ ತೋರುತಾಳೆ ನಕ್ಷತ್ರಗಳಿಗೆ
ಅಡಗಿದ್ದ ಕಡುಕತ್ತಲೆಯೆಡೆಗೆ!
ಮಿನುಗುನಗೆಗುಚ್ಚ ತಂದೆದುರಿಡುತಾಳೆ
"ಕಾವಳವೆಲ್ಲೆಡೆಯೂ ಕಳವಳವಲ್ಲ ಕಣೇ..
ಗುಟ್ಟು ನೂರಲಿ ಅಕ್ಕಾ, ಅಡಕದಿಟ ಹೆಕ್ಕಬೇಕು.
ನೋಡದೋ ಕತ್ತಲಲಿತ್ತು ತಾರೆ ಕಂಗಳ ಮಿನುಗು;
ಮತ್ತದರಲಿತ್ತು ಸೆರಗ ಕತ್ತಲೆಯ ನಗು!
ಬಿಡಿಸಿಬಿಡೇ ಗಂಟು.
ಹರವಿಬಿಡೇ ಸೆರಗು.
ಬಿಚ್ಚಿಡೇ ಬಚ್ಚಿಟ್ಟ ಕತ್ತಲು.
ನಿನದರಲೂ ಒಂದಷ್ಟು ಅವು ಮಿನುಗಲಿ
ಒಂದಿಷ್ಟು ಇವು ನಕ್ಕುಬಿಡಲಿ!"
ಸೆರಗ ಗಂಟಲಿ ಕತ್ತಲೂ ಒಂದಷ್ಟು
ReplyDeleteಬಚ್ಚಿಟ್ಟಿದ್ದಾಳಂತೆ ನುಂಗಿ ನುಂಗಿ !
.... ಒಂದು ಸಾಲಿನ ಸುತ್ತ ಹೆಣೆದು ಕೊಂಡ ಕವಿತೆ . ಎಂದಿನಂತೆ ಸಾಲುಗಳು ಚಂದ ಚಂದ
yess.... exactly...ಆ ಸಾಲೇ ಜೀವ!
Delete