Monday, August 10, 2015


ನಿಜವೇ..
ಅದುಮಬಹುದು
ಭಾವಮೊಗ್ಗರಳದಂತೆ, ಹಾಡು ಹುಟ್ಟದಂತೆ,
ಜೀವಸೆಲೆಯದು ನಿನ್ನಂತರ್ಜಲದ ವಶ!
ಚಿವುಟಬಹುದು
ಮುನ್ನುಗ್ಗದಂತೆ, ಇನ್ನೆತ್ತರಕೇರದಂತೆ,
ಬುಡದಿಂದ ತುದಿವರೆಗೆ ನಿನ್ನೆಡೆ ಬಾಗಿದೆ ಕಾಂಡ!

ಆದರೆ
ಮುರುಟಿಸಲಾರೆ ಬೇರು
ಉಳಿಯದಂತೆ, ಅಲ್ಲೇ ಹಬ್ಬದಂತೆ,
ಅದಾಗಲೇ ನನ್ನಾತ್ಮದೊಳಗಿಳಿದಿದೆ ನೋಡು!
ತಡೆಯಲಾರೆ ಶಕ್ತಿ
ಮತ್ತೆಮತ್ತೆ ಮೆಲ್ಲ ಅದೃಶ್ಯ ಚಿಗುರದಂತೆ,
ಅದಾಗಲೇ ನನ್ನಸ್ತಿತ್ವದ್ದಾಗಿದೆ ಕುರುಹು! 

ಅಯ್ಯೋ!
ನೀ ಬಂದಿರುವುದು ಸ್ನೇಹದಾವರಣದೊಳಗೆ,
ಅದಾಗಲೇ ಇಹದೆಲ್ಲ ಮೀರಿ ಚಿರಾಯುವಾಗಿಯಾಗಿದೆ  ಬಿಡು..

2 comments:

  1. ಖಂಡಿತಾ , ಬೇರನ್ನು ಮುರಿಯಲಹುದೇ .. ಎಲ್ಲೆಡೆಯಿಂದಲೂ ಮಾಯವಾದರೂ ಇಲ್ಲಿ ಮಾಯವಾಗಬೇಡಿ :)

    ReplyDelete