ಕಾಲಕೋಡುವುದಷ್ಟೇ ಗೊತ್ತು...
--------------------------
ರಾತ್ರಿ ಹೆತ್ತೊಪ್ಪಿಸಿ ಕಣ್ಮುಚ್ಚಿದೆ,
ಹಸುಗೂಸು ನಸುಕ
ಕಾಲನ ತೆಕ್ಕೆಗೆ,
ಹೊತ್ತೋಡುವುದಷ್ಟೇ ಗೊತ್ತವಗೆ,
ಇನ್ನೇನೂ ಅಲ್ಲ...
ನಗು ಹೂವು, ಅಳು ಇಬ್ಬನಿ,
ಕಾಲ್ಗೆಜ್ಜೆ ಹಕ್ಕಿಯುಲಿ, ದನಿ ಕರುವ ಕರೆಯಲಿ.
ಎಲ್ಲಕೂ ಜಗ ಚೆಲುವೆಂದಿತು,
ಏಳ್ಗೆಯ ಮೆಟ್ಟಿಲ ಮೆಚ್ಚಿ, ಮೆಟ್ಟಿ ಮುನ್ನಡೆಯಿತು
ಮುಟ್ಟಿ ಮೈದಡವಿದವರಿಲ್ಲ...
ಕಾಲಕರಿವಿಲ್ಲ, ಅದಕೋಡುವುದಷ್ಟೇ ಗೊತ್ತು,
ಕಣ್ಚುಚ್ಚುವ ರವಿಯ ಕಣ್ಕುಕ್ಕಿತು ಯೌವ್ವನ,
ತಡವಿಲ್ಲ, ಎತ್ತರದ ಹುಂಬತನ ಬೋರಲು,
ಕಾವಲಿಲ್ಲದ ತೆರಕೊಳ್ಳುವಿಕೆ ಕೆಳಗಂಗಾತ...
ಬಿಸಿಯ ಬಿಸಿಯಾಗಿಸಿದ ಹೆಣ್ತನ ಸೂರೆ,
ಕಾವು ಲೋಕವ ಬಿಟ್ಟಿಲ್ಲ,
ಕಾಲಕರಿವಿಲ್ಲ, ಅದಕೋಡುವುದಷ್ಟೇ ಗೊತ್ತು..
ತಳ್ಳಲ್ಪಟ್ಟು ನೀರಿಗೆ ಈಜಿನಳುಕು ಮಾಯ
ತಟಕೀಜುತಾ ಈಗಾಕೆ ಶಾಂತ ಸಂಧ್ಯೆ,
ಮಾಗಿದ ತಂಪು ಉರಿಸಿದ್ದಕೆ ಸವಾಲು..
"ಅವನಿಟ್ಟುಕೊಂಡದ್ದು, ನಾ ಸೂಳೆಯಲ್ಲ"
ಕೂಗಿದ್ದು ಕೆಂಗೆನ್ನೆಯ ನಗು,
ಕಾಲಕರಿವಿಲ್ಲ, ಅದೋಡುತಲೇ ಇದೆ.
ಭೂಮಿ ಬಿರಿದಂತೆ ಸೀತೆಗೆ,
ಇರುಳೋಡಿ ಬಂದಿದೆ, ಕೈಯ್ಯಗಲ ಚಾಚಿ...
ಕಾಲದೋಟದಿ ಕಂದ ಬೆಳೆದ ಸುಖ,
ಇಹವ್ಯಾಪಾರ ಬಳಸಿದ ನೋವಲಿ
ಲೀನವಾಯ್ತು, ಸಂಜೆ ತಾಯ್ತೆಕ್ಕೆಯಲಿ..
ತೆಕ್ಕೆ ಹಗುರಾದುದೂ ಗೊತ್ತಿಲ್ಲ,
ಕಾಲಕೋಡುವುದಷ್ಟೇ ಗೊತ್ತು...
--------------------------
ರಾತ್ರಿ ಹೆತ್ತೊಪ್ಪಿಸಿ ಕಣ್ಮುಚ್ಚಿದೆ,
ಹಸುಗೂಸು ನಸುಕ
ಕಾಲನ ತೆಕ್ಕೆಗೆ,
ಹೊತ್ತೋಡುವುದಷ್ಟೇ ಗೊತ್ತವಗೆ,
ಇನ್ನೇನೂ ಅಲ್ಲ...
ನಗು ಹೂವು, ಅಳು ಇಬ್ಬನಿ,
ಕಾಲ್ಗೆಜ್ಜೆ ಹಕ್ಕಿಯುಲಿ, ದನಿ ಕರುವ ಕರೆಯಲಿ.
ಎಲ್ಲಕೂ ಜಗ ಚೆಲುವೆಂದಿತು,
ಏಳ್ಗೆಯ ಮೆಟ್ಟಿಲ ಮೆಚ್ಚಿ, ಮೆಟ್ಟಿ ಮುನ್ನಡೆಯಿತು
ಮುಟ್ಟಿ ಮೈದಡವಿದವರಿಲ್ಲ...
ಕಾಲಕರಿವಿಲ್ಲ, ಅದಕೋಡುವುದಷ್ಟೇ ಗೊತ್ತು,
ಕಣ್ಚುಚ್ಚುವ ರವಿಯ ಕಣ್ಕುಕ್ಕಿತು ಯೌವ್ವನ,
ತಡವಿಲ್ಲ, ಎತ್ತರದ ಹುಂಬತನ ಬೋರಲು,
ಕಾವಲಿಲ್ಲದ ತೆರಕೊಳ್ಳುವಿಕೆ ಕೆಳಗಂಗಾತ...
ಬಿಸಿಯ ಬಿಸಿಯಾಗಿಸಿದ ಹೆಣ್ತನ ಸೂರೆ,
ಕಾವು ಲೋಕವ ಬಿಟ್ಟಿಲ್ಲ,
ಕಾಲಕರಿವಿಲ್ಲ, ಅದಕೋಡುವುದಷ್ಟೇ ಗೊತ್ತು..
ತಳ್ಳಲ್ಪಟ್ಟು ನೀರಿಗೆ ಈಜಿನಳುಕು ಮಾಯ
ತಟಕೀಜುತಾ ಈಗಾಕೆ ಶಾಂತ ಸಂಧ್ಯೆ,
ಮಾಗಿದ ತಂಪು ಉರಿಸಿದ್ದಕೆ ಸವಾಲು..
"ಅವನಿಟ್ಟುಕೊಂಡದ್ದು, ನಾ ಸೂಳೆಯಲ್ಲ"
ಕೂಗಿದ್ದು ಕೆಂಗೆನ್ನೆಯ ನಗು,
ಕಾಲಕರಿವಿಲ್ಲ, ಅದೋಡುತಲೇ ಇದೆ.
ಭೂಮಿ ಬಿರಿದಂತೆ ಸೀತೆಗೆ,
ಇರುಳೋಡಿ ಬಂದಿದೆ, ಕೈಯ್ಯಗಲ ಚಾಚಿ...
ಕಾಲದೋಟದಿ ಕಂದ ಬೆಳೆದ ಸುಖ,
ಇಹವ್ಯಾಪಾರ ಬಳಸಿದ ನೋವಲಿ
ಲೀನವಾಯ್ತು, ಸಂಜೆ ತಾಯ್ತೆಕ್ಕೆಯಲಿ..
ತೆಕ್ಕೆ ಹಗುರಾದುದೂ ಗೊತ್ತಿಲ್ಲ,
ಕಾಲಕೋಡುವುದಷ್ಟೇ ಗೊತ್ತು...
ಸಮಯದ ಕಣ್ಣಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾದ್ಯವಿಲ್ಲ, ಎಲ್ಲದ್ಕ್ಕೂ ಸಮಯವೇ ಸಾಕ್ಷಿ.ಸಮಯದ ಮುಂದೆ ನಾವೆಲ್ಲಾ ಶೂನ್ಯರು. ನಂಬಿ ಅರಿತು ಬಾಳಿದರೆ ಸ್ವರ್ಗ ಸುಖ. ಧನ್ಯವಾದಗಳು.
ReplyDeleteಬದುಕಿನ ಕತೆಯನ್ನು ಸುಂದರವಾಗಿ ಸೆರೆ ಹಿಡಿದಿದ್ದೀರಿ.
ReplyDeleteಹಲವು ವಿಷಾದಗಳನ್ನು ಮೂಟೆ ಕಟ್ಟಿ ನಮ್ಮ ಮುಂದೆ ಒಗೆದ ಅನುಭವ.
ReplyDelete