Monday, April 1, 2013

ಬೀಗದಿರು ಒಲವೇ....


-----------------------
ಬಿಟ್ಟು ತೆರಳಿದೆನೆಂದು ಬೀಗದಿರು,
ನಿನ್ನ ಹೆಜ್ಜೆಗುರುತಿಲ್ಲೇ ಅಳಿಯದುಳಿದಿವೆ...

ಜೋಪಾನ ಕೆಲವೊಂದು ಭಾವಚಿತ್ರಗಳು-
ನೀ ನಕ್ಕ ಸ್ಥಿರಚಿತ್ರ ಎದೆಗೋಡೆಯಲಿ,
ನವಿಲುಗರಿಯೊರೆಸಿದ ಚರಚಿತ್ರ ಕೆನ್ನೆಯಿಳಿಜಾರಲಿ,
ಣ್ಣಲೇ ಮುತ್ತಿಟ್ಟ ಸ್ವಪ್ನಚಿತ್ರ ಹಣೆಯಗಲ ನೆಲದಲಿ...

ಬಚ್ಚಿಟ್ಟಿರುವೆ ಕೆಲಕ್ಷಣ ಮೌನ ಮುಚ್ಚಳದಡಿ-
ದನಿಯಾಗದ ನೀ ಮೊದಲುಸುರಿದ ಮೆಚ್ಚುಗೆ,
ಹಾಡಾಗದ ನೀ ಬರೆದ ಕವಿತೆ,
ಟಪಾಲಾಗದ ಪ್ರೇಮಪತ್ರದ ಸಾಲು...

 ಪಾದಚಿಹ್ನೆ ಹಸಿಯಾಗಿವೆ ...
ಮೆತ್ತನಿಟ್ಟು ನೀ ಒಳಬಂದ ಹೆಜ್ಜೆಯದು,
ಮೆಟ್ಟಿ ಗುಳಿಮಾಡಿದ್ದು, ದಾಟಿ ಮೀರಿಹಾರಿದ್ದು,
ಆಸೆಪುಷ್ಪ ಹೊಸಕಿ, ಸಿಟ್ಟು ಹೊತ್ತು ಹೊರನಡೆದದ್ದು...

ನನ್ನೆದೆಯ ಮಣ್ಣಲಿ ಮೂಡಿವೆ, ನನ್ನಾಸ್ತಿ...
ನೀನೆತ್ತಿ ಒಯ್ಯಲಾರೆ...
ಕಣ್ಣೀರ ಮಳೆಗೂ ಕಿಂಚಿತ್ತೂ ಮಾಸಿಲ್ಲ,
ನೀನಳಿಸಲಾರೆ...
ಬೀಗದಿರು, ಹೆಜ್ಜೆಗುರುತೊಳಗೆ ಭದ್ರವಾಗಿವೆ,
ಜಡಿದ ಬೀಗದ ಕೀಲಿಕೈ ಮುರಿದಿರುವೆ.



4 comments:

  1. ನಮ್ಮನ್ನು ಕಾಲದ ಯಂತ್ರದಲ್ಲಿ ಕೂಡಿಸಿ ಯವ್ವನಕ್ಕೆ ಕರೆದೊಯ್ಯುವ ಯತ್ನದ ಈ ಕವನ ಮನಮುಟ್ಟಿತು.

    ReplyDelete
  2. ನನ್ನೆದೆಯ ಮಣ್ಣಲಿ ಮೂಡಿವೆ, ನನ್ನಾಸ್ತಿ...
    ನೀನೆತ್ತಿ ಒಯ್ಯಲಾರೆ...
    ಕಣ್ಣೀರ ಮಳೆಗೂ ಕಿಂಚಿತ್ತೂ ಮಾಸಿಲ್ಲ,
    ನೀನಳಿಸಲಾರೆ...
    ಬೀಗದಿರು, ಹೆಜ್ಜೆಗುರುತೊಳಗೆ ಭದ್ರವಾಗಿವೆ,
    ಜಡಿದ ಬೀಗದ ಕೀಲಿಕೈ ಮುರಿದಿರುವೆ.
    tumbaa apyayamanavaada bhavanegalu...manamuttuvantive...

    ReplyDelete
  3. ಸುಮ್ಮನೆ ಅನುಭವಿಸುದೊಂದೆ ದಾರಿ ಹೇಳೊದಕ್ಕೆ ಪದಗಳಿಲ್ಲ. ಎಲ್ಲವೂ ಅನುಭವ, ಅನುಭವ, ಅನುಭವ.....ಕನಸು ನನಸಾದರೆ ಸಾಕು. ನನ್ನ ಹ್ರಧಯ ಗೆದ್ದ ಸುಂದರ ಕವನ.

    ReplyDelete