ನನ್ನಲೇ ಅದುಳಿದುದು ಗೊತ್ತಿಲ್ಲ, ಸೋಲೋ ಗೆಲುವೋ!
ತಣ್ಣನೆ ಛಳುಕೊಂದು ಅಡಿಯಿಂದ ಮುಡಿಗೆ, ನೋವೋ ನಲಿವೋ!ದಾಟಲಾಗದೆ ಹೊಸಿಲು, ಎತ್ತಿದ ಹೂಹೆಜ್ಜೆ ಹಿಂದಿಡುವಾಗ ಮಣಭಾರ
ಮೀಟದುಳಿದ ತಂಬೂರಿಯೆದುರಿನ ಶ್ರುತಿತಪ್ಪಿದ ರಾಗ ರಾಜ್ಯಭಾರ
ಸಪ್ತವರ್ಣ ಕಾಲ್ಮುರಿದುಕೊಂಡು ಬಿದ್ದ ಕುಳಿಯೊಡಲು ಬರೀಬಿಳಿ
ಸತ್ತುದಕೆ ಹೊದಿಸುವ, ವಿಧವೆಬಾಳಿಗುಡಿಸುವ ಖಾಲಿಖಾಲಿ ಬಿಳಿ.
ತೂಕಕಿಡಲಾಗದ ವಿಷಯ, ಇಲ್ಲೊಳಗಿನ ತಕ್ಕಡಿಯಾಕೋ ಕಣ್ಮರೆ
ಮೂಕವಾಗಿದೆ ಬಹುಶಃ ಇದಿಷ್ಟೇ ಎಂದು ಹೇಳಲಾಗದ ಅಳುಕಿಗೆ.
ಅಷ್ಟು ತುಂಬಿಕೊಂಡೂ ಅದು ಹಗುರವೆಂದು ಕೈಲೆತ್ತಿಕೊಡಬಯಸಿದ್ದೆ
ಆಗದೆ ಮತ್ತೊಳ ಬಂದುದು ಎಲ್ಲ ಕಳಕೊಂಡ ಖಾಲಿಯೆಂದುಕೊಂಡೆ..
ಆದರೆ ನೋಡು, ನಿನ್ನೆ-ಮೊನ್ನೆಗಿಂತ ಇಂದು ಭರಪೂರ ನನ್ನೊಳಗು
ಅಚ್ಚರಿಯಿಲ್ಲ, ಸಾಲದೇ ಅಷ್ಟಡಿ ಎತ್ತರದ ನೀನು ಒಳಹೊಕ್ಕದ್ದು?
ಹುಚ್ಚಿ ನಾನು, ನಿನನಲ್ಲೇ ಹೊರಗಿಟ್ಟು ನಿನ್ನೊಳಹೊಗಬಯಸಿದ್ದೆ,
ಶತಾಯಗತಾಯ ಮುಚ್ಚಿದ್ದ ಕದದೂಡುವ ಒತ್ತಾಯದತಿಥಿಯಂತೆ.
ನನ್ನ ಸ್ವಾಗತದಾಲಾಪ ನೈವೇದ್ಯವಾಗಿತ್ತು ಅವಗೆ, ನಿನಗೆ ಪ್ರಸಾದ
ನನನಲ್ಲೇ ಇಟ್ಟು, ನನ್ನೊಳಹೊಗಿಸಿದ್ದು ನಿನ್ನ, ಅವನದೇ ಆಶೀರ್ವಾದ.
ಪರಕಾಯ ಪ್ರವೇಶದಂತಹ ಒಂದು ಭಾವ ನನ್ನಲ್ಲಿ ಮೂಡಿತೂ.
ReplyDeleteಚೆನ್ನಾಗಿದೆ..
ReplyDelete