ನೀ ಬಳಿಯಿರದಾಗಿನ ಪ್ರತೀಕ್ಷೆ
ಚಿನ್ನ ಪುಟಕಿಡುವ ಪರೀಕ್ಷೆ.
ಕಾದು, ಕುದಿದು ಗಳಗಳಚಿನ್ನ ಪುಟಕಿಡುವ ಪರೀಕ್ಷೆ.
ಕಾಲಪಾತ್ರೆ ತುಂಬ ಜೀವಜಲ
ಪ್ರೀತಿ ಮರಳುತಿದೆಯಲ್ಲಿ
ಭಕ್ತಿ ಬೇಯುವ ಕುಲುಮೆಯಲಿ..
ನೂರು ರೂಪ ನೂರು ಜನ್ಮದಲೆಲ್ಲೋ
ಒಮ್ಮೊಮ್ಮೆ ಆಗೋ ಸಾಕ್ಷಾತ್ಕಾರದಲಿ
ಕರಗಿ ಕನಸಾಗಿ ನಿನ್ನಿರುಳಲಿ,
ಹೊಳೆದುಂಗುರವಾಗಿ ಬೆರಳಲಿ
ಕಣ್ಣಲಿ ಗುರ್ತಿಸಿ ಬೆಟ್ಟಲಿ ಧರಿಸಿದ್ದಕೆ
ಬೆಂಬಿಡದೆ ಅದಿನ್ನು ಕಾಡಲಿದೆ ಜೋಕೆ..
ನಾನಿರುವಾಗ ಬರಹದ ನೆಪವಾಗಿ,
ಬರೀ ನೆನಪಾಗುಳಿವಾಗ ವಿರಹವಾಗಿ
ಪ್ರತೀಕ್ಷೆಗಳ ನಿಜ ವೇದನೆ ಇಲ್ಲಿ ವ್ಯಕ್ತ.
ReplyDelete