ಬಂಧುಗಳೇ.. ಒಂದು ಕೋರಿಕೆ
----------------
ಕಣ್ಣಿಗೊಂದು ಪಟ್ಟಿ-
"ನಮ್ಮದೀ ಬಣ್ಣ, ಅವರದದಲ್ಲ"
ಬಾಯಿಗೊಂದು ಮಂತ್ರ-
"ಅವರು ನಾವಲ್ಲ, ನಾವವರಲ್ಲ"
ಮನಸಲೊಂದೇ ತಂತ್ರ-
ಅವರ ತಪ್ಪು ಹುಡುಕುವುದು
ಎದೆಯಲೊಂದೇ ಕಾರ್ಯ-
ಅವರ ದ್ವೇಷಿಸುವುದು
ಬಂಧುಗಳೇ...
ತೊಳೆಯಿರೊಮ್ಮೆ ಮನ,
ಕಳೆಯಿರೊಮ್ಮೆ ಪೂರ್ವಾಗ್ರಹ
ಕಾಲಮೀರಿ ಉಳಿದ ಹಳತು, ಮಲಿನ
ಮಿತಿಮೀರಿದ ದ್ವೇಷ, ಮೈಮನಕೆ ವಿಷ
ಅವರದೂ ನಮದೂ ರಕ್ತ ಒಂದೇ, ಕೆಂಪು.
ಅವರೊಮ್ಮೊಮ್ಮೆ ನಾವೇ, ನಾವು ಅವರು.
ತಪ್ಪೇ ಹುಡುಕುವುದಾದರೆ, ಮೊದಲೇಕಲ್ಲ ನನದು?
ಪ್ರೀತಿಯಿಂದ ಸರಳ, ರೋಷದಿಂದಲ್ಲ ಬದುಕು.
ಆದಿಯಿಂದಲು ಮೂಲ ಮನುಜತೆ,
ಅದಕಾಗಿಲ್ಲ, ಕಾಲದ್ದಷ್ಟೇ ಸಂಕ್ರಮಣ.
ಸಲ್ಲದ್ದನೇ ದಾರಿದೀಪವೆನುವ ಮೌಢ್ಯ,
ಸ್ವಸ್ಥ ಸಮಾಜ ಕೆಡಿಸೋ ಅಪಮೌಲ್ಯ.
ನಿನ್ನೆ ಕಳೆದದ್ದು, ಎಳೆದಿಂದಿಗೆ ತರದೆ,
ಇಂದಿನಲಿರುವ, ಮುಂದಷ್ಟೇ ನೋಡುವ.
ಪರಿವರ್ತನೆ ಜಗದ ನಿಯಮ
ತಲೆಬಾಗಿ ಒಪ್ಪುವಾ, ಅಪ್ಪುವಾ..
ವಿವೇಕಿಗಳ ಮಾತಲಷ್ಟೆಷ್ಟೋ ಕೇಳಿದ್ದು,
ತಿರುಚದೆ, ಅವರ ನಮ್ಮೊಳಾವಾಹಿಸದೆ,
ನಾವು ನಾವಾಗಿರುವ, ಅವರವರಾಗಿರಲಿ
ಕೇಳಿದ್ದ ಅರಿತು, ಅರಗಿಸಿ, ಪರಿಪಾಲಿಸುವಾ.
ಸಂಕ್ರಾಂತಿಗಲೊಂದು ಒಳ್ಳೆಯ ಸಂದೇಶ...
ReplyDeleteಚನ್ನಾಗಿದೆ....