Thursday, May 16, 2013

ಈ ಕತೆ ಕೇಳಿ.


ಅಕ್ಷರಗಳ ಸಾಲುಸಾಲು ಮೆರವಣಿಗೆ
ಭಾವತೇರಲಿ ಕಾವ್ಯದೇವಗದು ನಿತ್ಯೋತ್ಸವ
ಅಭಿವ್ಯಕ್ತಿಯಬ್ಬರ ಆವೇಶದ ದೈವ
ಮೈದುಂಬಿ ಮನ ತೂರಾಡಿವೆ.

ಒಂದು ಕುಪ್ಪಳಿಸುವ ನಗುವ ಮುಗ್ಧತೆಯ
ಬಿಕ್ಕಳಿಸುವ ನೋವಿನ ಸ್ಥಬ್ಧತೆ ತಾಕಿದೆ.

ಮುಖ ಮರೆಸುವ ಆ ವ್ಯವಸ್ಥೆಯಲಿ

ಮನ ನಂಬಿದ ಸೇತು ಗಟ್ಟಿ ನಿಂತಿದೆ.

ನೋವುಟ್ಟ ಶಲ್ಯ ಕಣ್ಣೀರಲಿ ತೊಯ್ದುಹೋಯ್ತು
ನಗೆಯ ಸೀರೆಸೆರಗಂಚು ಕಣ್ಣೊರೆಸೆ ಬಂತು.
ಆ ಭಾವಕಾವೇರಿಯ ತಲಕಾವೇರಿ ತಲುಪಿ
ಮಿಂದು ಮಡಿಯಾಯ್ತು ಸ್ನೇಹಸಿಂಚನದಲಿ.

ತೇಲುವ ತರಗೆಲೆಯಲೇ ನಗುವಿನ ಭೂಭ್ರಮಣ
ತೂಕದ ಲಹರಿಗೂ ಅಸಾಧ್ಯ ನೋವ ಸಂಕ್ರಮಣ.
ನಿಂತಲ್ಲೇ ನಿಂತು ನೋವು ಬೇಯುತಿತ್ತು,
ಹೊಸಿಲು ದಾಟಿ ನಗು ಹಾಡಿ, ಕುಣಿದು ರಮಿಸಿತು.

ರಭಸಕೊಮ್ಮೊಮ್ಮೆ ಕಂಗೆಟ್ಟರೂ,
ಒಡ್ಡಿಕೊಂಡ ತಲೆ ತಗ್ಗಬೇಕಾದರೂ,
ಕಾಣದ ಸಂಧಿಗ್ಧತೆ ಕಂಗೆಡಿಸಿದರೂ
ನೋವ ನಗಿಸುವ ಹಠ ನಗೆಗೇನೇ ಆದರೂ...

ತಣಿಯುತಿಲ್ಲ ನೋವು ಬಡಪೆಟ್ಟಿಗೆ.
ಕೈಹಾಕಿದೆ ಮೆಲ್ಲ ಕೈಯ್ಯಳತೆಯ ಸೆರಗಿಗೆ.
ಮುನ್ನುಗ್ಗುವ ನಗೆಯ ಪುಟಿವ ಹೆಜ್ಜೆ
ಹಿಮ್ಮೆಟ್ಟುತಾ ಪ್ರಶ್ನೆಯಾಗಿದೆ ತಾನೇ ತನಗೆ.

ಮುಖ ವ್ಯಕ್ತಿತ್ವದ ಕನ್ನಡಿ,
ಮುಖ ಕಾಣದುತ್ಸವದಲಿ
ನೋವ ಸಂತೈಸುವ ನಿಟ್ಟಿನಲಿ
ನಗುವೊಂದು ನೋವಾದ ಈ ಕತೆ ಕೇಳಿ.









3 comments:

  1. ನೋವುಟ್ಟ ಶಲ್ಯ ಕಣ್ಣೀರಲಿ ತೊಯ್ದುಹೋಯ್ತು
    ನಗೆಯ ಸೀರೆಸೆರಗಂಚು ಕಣ್ಣೊರೆಸೆ ಬಂತು.
    ಆ ಭಾವಕಾವೇರಿಯ ತಲಕಾವೇರಿ ತಲುಪಿ
    ಮಿಂದು ಮಡಿಯಾಯ್ತು ಸ್ನೇಹಸಿಂಚನದಲಿ.

    ಎಲ್ಲಿಂದ ಒಂದೊಂದು ಶಬ್ಧಗಳನ್ನು ತಂದು
    ಕೂರಿಸಿಬಿಡುತ್ತೀರೋ.....

    ಎಂತಹ ಭಾವಗಳು ಹೊಮ್ಮಿಬಿಡುತ್ವೆ....

    too supper....

    ReplyDelete
  2. "ನಿಂತಲ್ಲೇ ನಿಂತು ನೋವು ಬೇಯುತಿತ್ತು,
    ಹೊಸಿಲು ದಾಟಿ ನಗು ಹಾಡಿ, ಕುಣಿದು ರಮಿಸಿತು." ವಾವ್

    ReplyDelete