ಹುಣ್ಣಿಮೆಯ ಹಿಂದಿನಿರುಳೇ ನೀನು?
---------------
ನಿಶೆ ಹರಡಿ ಕರಿಹೆರಳ,
ಗಿರಗಿರನೆ ಇಳೆಸಖಿಯ
ಜೊತೆಗೂಡಿ ತಿರುಗಿದ್ದಕೆ
ಉದ್ವೇಗದ ಉತ್ಸಾಹದ ಬೆವರಹನಿ
ಚಿಮ್ಮಿ, ಚೆಲ್ಲಿ ಚುಕ್ಕಿತಾರೆ ಹೊಳೆದಂತೆ...
ಬಿಳಿತೆಳುಪರದೆ ಹಿಂದೆ ಕಪ್ಪುಚೆಲುವೆ,
ನಾಚಿ ಅರೆಗಣ್ಣ ತುಂಡುಪಾಪೆ ಚಂದ್ರನಂತೆ..
ನಾಳೆ ಬಾನು ಸುರಿವ ಪ್ರೀತಿಯ
ಹಾಲಮಳೆಗಾಗಿ ಕಾದು ನಿಂತಂತೆ..
ಹುಣ್ಣಿಮೆಯ ಮುನ್ನಾದಿನದೊಂದು ರಾತ್ರಿ.
ಒಳಗೆ ವೈಶಾಖದ ಧಗೆ,
ತಂಪರಸಿ ಹೊರನಡೆದ ತನುಮನ,
ಕಲ್ಪವೃಕ್ಷದ ನೆರಳ ಹಾಸಿನಾಶ್ರಯಕೆ..
ಗರಿಯೆಳೆಯೆಳೆ ಬೆಳ್ಳಿ ಲೇಪ ಹೊದ್ದು ಮಿರಮಿರ
ಮೌನಕೆ ಸಡ್ಡು ಹೊಡೆವ ಬಾವಲಿರೆಕ್ಕೆ ಸದ್ದು ಪರಪರ.
ಮೆಲ್ಲಬೀಸಿತು ಗರಿ... ಬೆವರಪಸೆ ಹೀರಿದ ಗಾಳಿ,
ಮೈಯ್ಯ ಉಷ್ಣವ ತಲುಪಿದ್ದು ತಂಪಾಗಿ..
ಸಣ್ಣಗಾಳಿಯಲೆ, ದೊಡ್ದಸಾಂತ್ವನ.
ಯಾಕೋ ಹಿಂದೋಡಿ ಮತ್ತೆ ಮನ ಹಗಲ ತೆಕ್ಕೆಗೆ.
ನೀ ಬಂದು ಹೋದೆ, ಛಾಪಿಳಿಸಿ ಹೋದೆ.
ಖಾಲಿ ಮನದಂಗಳದ ಬಿಸಿಯುಸಿರು
ಹಿರಿತನದ ಛಾಯೆಯಡಿ
ವಾತ್ಸ್ಯಲ್ಯದ ಲೇಪದಲಿ,
ಮಿರಮಿರ ಮಿಂಚಿದ್ದೂ ಹೌದು,
ತಂಪಾದದ್ದೂ ಹೌದು.---------------
ನಿಶೆ ಹರಡಿ ಕರಿಹೆರಳ,
ಗಿರಗಿರನೆ ಇಳೆಸಖಿಯ
ಜೊತೆಗೂಡಿ ತಿರುಗಿದ್ದಕೆ
ಉದ್ವೇಗದ ಉತ್ಸಾಹದ ಬೆವರಹನಿ
ಚಿಮ್ಮಿ, ಚೆಲ್ಲಿ ಚುಕ್ಕಿತಾರೆ ಹೊಳೆದಂತೆ...
ಬಿಳಿತೆಳುಪರದೆ ಹಿಂದೆ ಕಪ್ಪುಚೆಲುವೆ,
ನಾಚಿ ಅರೆಗಣ್ಣ ತುಂಡುಪಾಪೆ ಚಂದ್ರನಂತೆ..
ನಾಳೆ ಬಾನು ಸುರಿವ ಪ್ರೀತಿಯ
ಹಾಲಮಳೆಗಾಗಿ ಕಾದು ನಿಂತಂತೆ..
ಹುಣ್ಣಿಮೆಯ ಮುನ್ನಾದಿನದೊಂದು ರಾತ್ರಿ.
ಒಳಗೆ ವೈಶಾಖದ ಧಗೆ,
ತಂಪರಸಿ ಹೊರನಡೆದ ತನುಮನ,
ಕಲ್ಪವೃಕ್ಷದ ನೆರಳ ಹಾಸಿನಾಶ್ರಯಕೆ..
ಗರಿಯೆಳೆಯೆಳೆ ಬೆಳ್ಳಿ ಲೇಪ ಹೊದ್ದು ಮಿರಮಿರ
ಮೌನಕೆ ಸಡ್ಡು ಹೊಡೆವ ಬಾವಲಿರೆಕ್ಕೆ ಸದ್ದು ಪರಪರ.
ಮೆಲ್ಲಬೀಸಿತು ಗರಿ... ಬೆವರಪಸೆ ಹೀರಿದ ಗಾಳಿ,
ಮೈಯ್ಯ ಉಷ್ಣವ ತಲುಪಿದ್ದು ತಂಪಾಗಿ..
ಸಣ್ಣಗಾಳಿಯಲೆ, ದೊಡ್ದಸಾಂತ್ವನ.
ಯಾಕೋ ಹಿಂದೋಡಿ ಮತ್ತೆ ಮನ ಹಗಲ ತೆಕ್ಕೆಗೆ.
ನೀ ಬಂದು ಹೋದೆ, ಛಾಪಿಳಿಸಿ ಹೋದೆ.
ಖಾಲಿ ಮನದಂಗಳದ ಬಿಸಿಯುಸಿರು
ಹಿರಿತನದ ಛಾಯೆಯಡಿ
ವಾತ್ಸ್ಯಲ್ಯದ ಲೇಪದಲಿ,
ಮಿರಮಿರ ಮಿಂಚಿದ್ದೂ ಹೌದು,
ಕೊರತೆಗೊಂದು ಸಡ್ಡು ಹೊಡೆದ ಆ ಕರೆ
ನಾನಲ್ಲದ್ದುದ ನಾನಾಗಿಸಿದ್ದೂ ಹೌದು.
ಸಾಂತ್ವನದ ಹಿರಿಸೊಡರು ಕಿರು ಅಸ್ತಿತ್ವವೇ,
ರಾತ್ರಿಯ ಬೆಳಕಿಗೊಯ್ವ ಸಾಧ್ಯತೆಯ ಹೊಳಪಲಿ
ನಿನಗೊಂದು ಪ್ರಶ್ನೆ....
ನಾಳೆ ಬರಲಿರುವ ಹುಣ್ಣಿಮೆಯ
ಮುನ್ನಾದಿನದಿರುಳೇನೋ ನೀನು?!
'ಚಿಮ್ಮಿ, ಚೆಲ್ಲಿ ಚುಕ್ಕಿತಾರೆ ಹೊಳೆದಂತೆ...' ವಾವ್ ಕವಿಯತ್ರಿ ನಿಮ್ಮ ಕಲ್ಪನೆಗೆ ಸಲಾಮು...
ReplyDeleteನಿಮ್ಮ ಸಲಾಮಿಗೆ ನನದೂ ಒಂದು ಸಲಾಮು ಸರ್..
Deleteನಿಮ್ಮ ಕವನಗಳು ವಿಭಿನ್ನವಾಗಿವೆ ಹಾಗು original ಆಗಿವೆ. ಸಹಜವಾಗಿಯೇ, ನಿಮ್ಮಿಂದ ಉತ್ತಮ ಕಾವ್ಯ ಹೊರಬರುತ್ತಿದೆ.
ReplyDeletethank u sunath
Deleteಚೆನ್ನಾಗಿದೆ ಅನು. ಕಲ್ಪನೆಗಳ ಮಾಹಾಪೊರ ನಿಮ್ಮದಾಗಿದೆ. ಹುಣ್ಣಿಮೆಯ ಪೂರ್ಣ ಚಂದ್ರ ನಂತೆ ನಿಮ್ಮ ಕಾವ್ಯ ಬೆಳಗಲಿ.
ReplyDeletethank u nagraj
ReplyDelete