ಅದೂ ಅಲ್ಲಿಗೇ, ಇದೂ ಅಲ್ಲಿಗೇ
----------------
ಸೋಲಿನ ಮೈದಾನದ ತುಂಬ ಗೀಟುಗಳು
ಬಿಳಿಬಿಳಿ ಕಣ್ಣುಕುಕ್ಕುವ
ಸುಡುವ ಸುಣ್ಣದ ಗೆರೆಗಳು,
ಮಿತಿ, ಅನುಮತಿಗಳ ಸೂಚನೆ
ಒಮ್ಮೊಮ್ಮೆ ಚೌಕಟ್ಟೂ ಆಗುವ ರೇಖೆಗಳು..
ಹಿಂದುಮುಂದೆಲ್ಲಾ ಓಟಗಳು, ಸ್ಪರ್ಧೆಗಳು
ಹುಡುಕಾಟ ಮತ್ತೊಂದಷ್ಟು ಜಿಜ್ಞಾಸೆಗಳು.
ಸತ್ಯ ಬರೆಯಿರಿ, ಸತ್ಯ ನುಡಿಯಿರಿ,
ಸತ್ಯ ಹಾಡಿರಿ, ಸತ್ಯವನೇ ಬಿಡಿಸಿರಿ.
ಕೊನೆಗೋ ಮೊದಲೋ... ಸತ್ಯ ತಲುಪಿರಿ....
ಪ್ರೋತ್ಸಾಹದ ಕೂಗು ಮಾರ್ನುಡಿದು
ಬರುಬರುತ್ತಾ ಕರ್ಕಶವಾದಂತೆ..
ಹಿಡಿವಾಸೆಗೆಲ್ಲಾದರೂ ಕೊನೆಯುಂಟೇ...
ಹಿಡಿತಕ್ಕೆ ಬಂದದ್ದು ಅದಲ್ಲವೆಂಬ ದಿವ್ಯಜ್ಞಾನ ಬೇರೆ...
ಓಟದಲೇ ಬಳಲಿ ಜೀವ, ನಡಿಗೆ ಮರೆತು
ಕೊನೆಗೀಗ ನಿಲ್ಲುವುದನ್ನೂ...
ತಾ ತಾನಲ್ಲದ ಭ್ರಮೆಯ ಮೋಡಿಯೊಳಗೆ.
ಸತ್ಯ ನಿರಾಕಾರ, ಅದೊಂದು ಮೌನ
ನಿರ್ವರ್ಣ, ಅಷ್ಟೇ ಏಕೆ ಅದೊಂದು ನಿರ್ವಾತ..
ಅಲ್ಲಿ ಉಸಿರಿಗೆಡೆಯಿಲ್ಲ, ಹಾಗೆ ನಿರ್ಜೀವವೂ ಹೌದು.
ಅದಕೇನು ವರ್ಣನೆ, ವಿವರಣೆ ಮತ್ತಾಲಾಪನೆ?!
ಸಮೀಪಿಸಿದಂತೆಲ್ಲಾ ದೂರವಾಗುವ ಮೃಗಜಲ
ಆ ಸತ್ಯವೇ ಬೇಕೇಕೆ, ಕಲ್ಪನೆ ಸಾಲದೇ?
ಕಲ್ಪನೆ ಚಿತ್ರ, ದನಿ, ಅಕ್ಷರ, ಹಾಡು
ಹೀಗೇ..ಏನಾದರೂ ಆದೀತು,
ಅಲ್ಲಿ ಗೆರೆಯಿಲ್ಲ, ಮಿತಿ-ಅನುಮತಿಗಳಿಲ್ಲ.
ಹೇಗೆಂದರೆ ಹಾಗೆ, ಎಲ್ಲೆಂದರಲ್ಲಿ ತೂರಿ
ತುಂಬುವುದೂ ಗೊತ್ತದಕೆ, ಮತ್ತಡಗುವುದೂ..
ಸತ್ಯವಲ್ಲಷ್ಟೇ ಇದೆ ಕೊನೆಯೆಂಬಲ್ಲಿ
ಎಲ್ಲ ನಡಿಗೆ, ಓಟಗಳೂ ಆ ಕಡೆಗೇ ಹೌದು
ಕಲ್ಪನೆಯೂ ಒಯ್ಯುವುದು, ಸತ್ಯ ಶೋಧನೆಯೂ...
ನಿರಾಸೆಯ ತುತ್ತುಣಿಸುವ
ಶ್ವಾಸಗಟ್ಟುವ ಪಂದ್ಯವೇಕೆ,
ಉಮೇದೇ ಉಸಿರಾದ
ಗೆದ್ದ ಸ್ವಪ್ನದ ಹಾರುನಡಿಗೆಯಾಗದೇ?!
----------------
ಸೋಲಿನ ಮೈದಾನದ ತುಂಬ ಗೀಟುಗಳು
ಬಿಳಿಬಿಳಿ ಕಣ್ಣುಕುಕ್ಕುವ
ಸುಡುವ ಸುಣ್ಣದ ಗೆರೆಗಳು,
ಮಿತಿ, ಅನುಮತಿಗಳ ಸೂಚನೆ
ಒಮ್ಮೊಮ್ಮೆ ಚೌಕಟ್ಟೂ ಆಗುವ ರೇಖೆಗಳು..
ಹಿಂದುಮುಂದೆಲ್ಲಾ ಓಟಗಳು, ಸ್ಪರ್ಧೆಗಳು
ಹುಡುಕಾಟ ಮತ್ತೊಂದಷ್ಟು ಜಿಜ್ಞಾಸೆಗಳು.
ಸತ್ಯ ಬರೆಯಿರಿ, ಸತ್ಯ ನುಡಿಯಿರಿ,
ಸತ್ಯ ಹಾಡಿರಿ, ಸತ್ಯವನೇ ಬಿಡಿಸಿರಿ.
ಕೊನೆಗೋ ಮೊದಲೋ... ಸತ್ಯ ತಲುಪಿರಿ....
ಪ್ರೋತ್ಸಾಹದ ಕೂಗು ಮಾರ್ನುಡಿದು
ಬರುಬರುತ್ತಾ ಕರ್ಕಶವಾದಂತೆ..
ಹಿಡಿವಾಸೆಗೆಲ್ಲಾದರೂ ಕೊನೆಯುಂಟೇ...
ಹಿಡಿತಕ್ಕೆ ಬಂದದ್ದು ಅದಲ್ಲವೆಂಬ ದಿವ್ಯಜ್ಞಾನ ಬೇರೆ...
ಓಟದಲೇ ಬಳಲಿ ಜೀವ, ನಡಿಗೆ ಮರೆತು
ಕೊನೆಗೀಗ ನಿಲ್ಲುವುದನ್ನೂ...
ತಾ ತಾನಲ್ಲದ ಭ್ರಮೆಯ ಮೋಡಿಯೊಳಗೆ.
ಸತ್ಯ ನಿರಾಕಾರ, ಅದೊಂದು ಮೌನ
ನಿರ್ವರ್ಣ, ಅಷ್ಟೇ ಏಕೆ ಅದೊಂದು ನಿರ್ವಾತ..
ಅಲ್ಲಿ ಉಸಿರಿಗೆಡೆಯಿಲ್ಲ, ಹಾಗೆ ನಿರ್ಜೀವವೂ ಹೌದು.
ಅದಕೇನು ವರ್ಣನೆ, ವಿವರಣೆ ಮತ್ತಾಲಾಪನೆ?!
ಸಮೀಪಿಸಿದಂತೆಲ್ಲಾ ದೂರವಾಗುವ ಮೃಗಜಲ
ಆ ಸತ್ಯವೇ ಬೇಕೇಕೆ, ಕಲ್ಪನೆ ಸಾಲದೇ?
ಕಲ್ಪನೆ ಚಿತ್ರ, ದನಿ, ಅಕ್ಷರ, ಹಾಡು
ಹೀಗೇ..ಏನಾದರೂ ಆದೀತು,
ಅಲ್ಲಿ ಗೆರೆಯಿಲ್ಲ, ಮಿತಿ-ಅನುಮತಿಗಳಿಲ್ಲ.
ಹೇಗೆಂದರೆ ಹಾಗೆ, ಎಲ್ಲೆಂದರಲ್ಲಿ ತೂರಿ
ತುಂಬುವುದೂ ಗೊತ್ತದಕೆ, ಮತ್ತಡಗುವುದೂ..
ಸತ್ಯವಲ್ಲಷ್ಟೇ ಇದೆ ಕೊನೆಯೆಂಬಲ್ಲಿ
ಎಲ್ಲ ನಡಿಗೆ, ಓಟಗಳೂ ಆ ಕಡೆಗೇ ಹೌದು
ಕಲ್ಪನೆಯೂ ಒಯ್ಯುವುದು, ಸತ್ಯ ಶೋಧನೆಯೂ...
ನಿರಾಸೆಯ ತುತ್ತುಣಿಸುವ
ಶ್ವಾಸಗಟ್ಟುವ ಪಂದ್ಯವೇಕೆ,
ಉಮೇದೇ ಉಸಿರಾದ
ಗೆದ್ದ ಸ್ವಪ್ನದ ಹಾರುನಡಿಗೆಯಾಗದೇ?!
ಸತ್ಯವನ್ನೇ ಹೇಳಿದಿರಿ! ಬದುಕಲು ಕಲ್ಪನೆ ಬೇಕು, fantasy ಬೇಕು. ಸತ್ಯವನ್ನು ಅರಗಿಸಿಕೊಳ್ಳಲು ಕೆಲವೊಮ್ಮೆ ವಿಷಕಂಠನೇ ಬೇಕು!
ReplyDeleteಚೆನಾಗಿದೆ ಅನು. ಸತ್ಯಕ್ಕೆ ಎಂದೂ ಜಯವಿದೆ. ಸತ್ಯವಿದ್ದಲ್ಲಿ ಹೆದರಿಕೆ ಇರೊಲ್ಲ. ಹಾಗೆಯೇ ಅರಗಿಸಿಕೊಳ್ಳೋದು ಕಷ್ಟ. ಹಾಗೆ ಅಂತಾ ಸತ್ಯವನ್ನು ಬಿಟ್ಟು ನಡೆಯೋಕ್ಕಗಲ್ಲ. ಕಪಟದ ಜೀವನದಲ್ಲಿ ಎಲ್ಲಾ ಸಿಹಿಯಾಗಿರುವ ವಿಷ ಮಾತ್ರ. ಶುಭವಾಗಲಿ.
ReplyDelete