ಅಲ್ಲಿಲ್ಲಿನ ಶಬ್ಧಕೆ ಹೆದರಿ ಮುದುರುವುದೇಕೆ?
ನಿನ್ನೊಳಗೆ ಸ್ಥೈರ್ಯ ಶಂಖವೂದಿರುವಾಗ!ತೆವಳುವಂತೆಯೇ ಕಾಣಿಸಲಿ ಜಗಕೆ
ಸಾಗುವುದು, ಸಾಗುತಿರುವುದು ಮುಖ್ಯ ನಿನಗೆ..
ಅಡಗಿದಂತೆಯೇ ಕಾಣಿಸಲಿ ಜಗಕೆ
ವ್ಯಕ್ತವಾಗುವುದು, ಅರ್ಥವಾಗುವುದು ಮುಖ್ಯ ನಿನಗೆ..
ಗುರಿ ಹಾಸ್ಯಾಸ್ಪದವೆನಿಸಲಿ ಜಗಕೆ
ತಲುಪುವುದು, ಸ್ಪರ್ಶಿಸುವುದು ಮುಖ್ಯ ನಿನಗೆ
ಸತ್ವಹೀನ ಒಳಗೆನಿಸಲಿ ಜಗಕೆ
ಒಡೆಯದುಳಿವುದು ಗಟ್ಟಿಯುಳಿವುದು ಮುಖ್ಯ ನಿನಗೆ
ಅಭಿವ್ಯಕ್ತಿ ಪೊಳ್ಳೇ ಅನಿಸಲಿ ಜಗಕೆ
ತೆರೆದುಕೊಳುವುದು, ಒಳಗೊಳುವುದು ಮುಖ್ಯ ನಿನಗೆ
ನೀ ಸುಳ್ಳೇ ಅನಿಸಲಿ ಜಗಕೆ,
ಟೊಳ್ಳಾಗದಿರುವುದು ಜೊಳ್ಳಾಗದಿರುವುದು ಮುಖ್ಯ ನಿನಗೆ
No comments:
Post a Comment