ಒಂದೂರು
ಊರಿಗೊಬ್ಬ ನಾಯಕ,
ಚಪ್ಪಾಳೆ ಪರಾಕುಗಳೊಡೆಯಊರಿಗೊಬ್ಬ ನಾಯಕ,
ಜೊತೆಗೊಬ್ಬ ಖಳನಾಯಕ
ಕೆಂಗಣ್ಣುರಿ, ಬಯ್ಗುಳದ ಹಕ್ಕುದಾರ
ನಡುವೊಬ್ಬ ಸಾಮಾನ್ಯ ಯುವಕ
ಅವನ ಎಕ್ಕರಿಸಿ ಕಾಣುತಲೇ
ಇವನ ಕೆಕ್ಕರಿಸಿ ಉಗಿಯುತಲೇ
ಆರಕೇರದೆ ಮೂರಕಿಳಿಯದೆ ಬಾಳುವ
ಗುಬ್ಬಚ್ಚಿಯೊಂದೇಟಾಗಿ
ರೆಕ್ಕೆ ಮುರಿದು ಬಿದ್ದ ಕ್ಷಣ
ನರಮುಟ್ಟಿದ ಹಕ್ಕಿ ಗೂಡೊಳ
ಸೇರದೆಂದು ನಡೆದನವ ಸುಮ್ಮನೇ....
ಇವನೆತ್ತಿ ಪಟ್ಟಿಕಟ್ಟಿ
ಸಾಕಿಸಲಹಿ ಹಾರಿಬಿಟ್ಟ ಸುಮ್ಮನೇ ...
ಯುವಕ ಬಯ್ಯುತಲೇ ನಡೆದಿದ್ದ
ಹಾರಿಹೋದುದೆಲ್ಲಿಗೆ ಹೋದೀತು
ಗೂಡಿಲ್ಲದೇ ಹೇಗುಳಿದೀತು?!
ನಾಯಕನ ಹೊಗಳುತಲೇ ನಡೆದಿದ್ದ
ಗೂಡಿಗಾಗಿ ಗುಬ್ಬಿ ಮುಟ್ಟದುಳಿದ ಹಿರಿತನಕೆ..
ಹಾರಿಹೋದ ಗುಬ್ಬಚ್ಚಿ ಹೊಸಗೂಡಿಗೆ
ಕಸಕಡ್ಡಿ ಆರಿಸುತಿತ್ತು,
ಪಟ್ಟಿಕಟ್ಟಿ ಮುರಿದುದ ಜೋಡಿಸಿದವನ
ಬಿಡದೆ ನೆನೆಯುತಿತ್ತು..
ಯಾವುದೋ ಸತ್ಯ ಕಥೆ ಹೀಗೆ ಕವನವಾದ ಹಾಗಿದೆ. ಮಾರ್ಮಿಕವಾಗಿದೆ.
ReplyDeleteಒಂದು ಗುಬ್ಬಿಯ ಕತೆಯಲ್ಲಿ ಜೀವನದ ವಾಸ್ತವಗಳು ಹಾದುಹೋದಂತಾಯಿತು.. ಚೆನ್ನಾಗಿದೆ :-)
ReplyDeletethank you prashasti.
Delete