ಅವ ಕೇಳುತಾನೆ, ಅವಳನ್ನುತಾಳೆ..
--------------------------
"ನೀನೇಕೆ ಸುರಿಯಲೊಲ್ಲೆ? "
ಅವ ಕೇಳುತಾನೆ, ಅವಳನ್ನುತಾಳೆ..
"ಮೋಡವಲ್ಲ ನಾನು, ಹೊತ್ತಿಲ್ಲ ಬಾನು,
ಕಾದು ಕೆಳಗೆ ಹರಡಿಕೊಂಡಿಲ್ಲ ನೀನು"
"ನೀನೇಕೆ ಹರಿಯಲೊಲ್ಲೆ?"
ಅವ ಕೇಳುತಾನೆ, ಅವಳನ್ನುತಾಳೆ..
"ನದಿಯಲ್ಲ , ಹರಿವು ಹುಟ್ಟಿಸುವ ದಂಡೆಗಳಿಲ್ಲ ...
ಕೈಯ್ಯಗಲಿಸಿ ಕರೆಯುವ ಸಾಗರವಲ್ಲ ನೀನು"
"ನೀನೇಕೆ ಕರೆಯಲೊಲ್ಲೆ?"
ಅವ ಕೇಳುತಾನೆ, ಅವಳನ್ನುತಾಳೆ..
"ನಾ ಕೋಗಿಲೆಯೇನು? ಮೂಕ ಕಂಠವೆನದು
ವಸಂತನಲ್ಲ, ಮಾವು ಚಿಗುರಿಸಿಟ್ಟಿಲ್ಲ ನೀನು"
"ನೀನೇಕೆ ಅರ್ಥೈಸಲೊಲ್ಲೆ?"
ಅವ ಕೇಳುತಾನೆ; ಅವಳನ್ನುತಾಳೆ..
"ನಾ ಶಂಖವಲ್ಲ, ಒಳಗೆ ತೀರ್ಥವಿಲ್ಲ
ರಕ್ತದ ಭಾಷೆ, ಧಾಟಿಗಳನರಿತಿಲ್ಲ ನೀನು"
"ನೀನೇಕೆ ಮರೆಯಲೊಲ್ಲೆ?"
ಅವ ಕೇಳುತಾನೆ; ಅವಳನ್ನುತಾಳೆ..
"ನಾನಲ್ಲ, ಉಸಿರು ನೆನಪ ಜತನ ಮಾಡಿಟ್ಟಿರುವುದು
ಅದೇ ಉಸಿರ ಆಧರಿಸಿ ಜೀವಂತ ನಾನು"
--------------------------
"ನೀನೇಕೆ ಸುರಿಯಲೊಲ್ಲೆ? "
ಅವ ಕೇಳುತಾನೆ, ಅವಳನ್ನುತಾಳೆ..
"ಮೋಡವಲ್ಲ ನಾನು, ಹೊತ್ತಿಲ್ಲ ಬಾನು,
ಕಾದು ಕೆಳಗೆ ಹರಡಿಕೊಂಡಿಲ್ಲ ನೀನು"
"ನೀನೇಕೆ ಹರಿಯಲೊಲ್ಲೆ?"
ಅವ ಕೇಳುತಾನೆ, ಅವಳನ್ನುತಾಳೆ..
"ನದಿಯಲ್ಲ , ಹರಿವು ಹುಟ್ಟಿಸುವ ದಂಡೆಗಳಿಲ್ಲ ...
ಕೈಯ್ಯಗಲಿಸಿ ಕರೆಯುವ ಸಾಗರವಲ್ಲ ನೀನು"
"ನೀನೇಕೆ ಕರೆಯಲೊಲ್ಲೆ?"
ಅವ ಕೇಳುತಾನೆ, ಅವಳನ್ನುತಾಳೆ..
"ನಾ ಕೋಗಿಲೆಯೇನು? ಮೂಕ ಕಂಠವೆನದು
ವಸಂತನಲ್ಲ, ಮಾವು ಚಿಗುರಿಸಿಟ್ಟಿಲ್ಲ ನೀನು"
"ನೀನೇಕೆ ಅರ್ಥೈಸಲೊಲ್ಲೆ?"
ಅವ ಕೇಳುತಾನೆ; ಅವಳನ್ನುತಾಳೆ..
"ನಾ ಶಂಖವಲ್ಲ, ಒಳಗೆ ತೀರ್ಥವಿಲ್ಲ
ರಕ್ತದ ಭಾಷೆ, ಧಾಟಿಗಳನರಿತಿಲ್ಲ ನೀನು"
"ನೀನೇಕೆ ಮರೆಯಲೊಲ್ಲೆ?"
ಅವ ಕೇಳುತಾನೆ; ಅವಳನ್ನುತಾಳೆ..
"ನಾನಲ್ಲ, ಉಸಿರು ನೆನಪ ಜತನ ಮಾಡಿಟ್ಟಿರುವುದು
ಅದೇ ಉಸಿರ ಆಧರಿಸಿ ಜೀವಂತ ನಾನು"
ಹಲವು ಸಂಸಾರಗಳ ಗೋಡೆ ಹಿಂದಿನ ರಹಸ್ಯ!
ReplyDelete