ನೀ ಬದುಕ ಕ್ಷಣಕ್ಷಣ ಸವಿಯುವ ಸಾಧನ
ಆದರೆ ನೋವುಣಿಸುತಲೇ ಬಂದಿರುವುದು,
ನೀ ಬದುಕಿನ ಅದಮ್ಯ ಧೈರ್ಯದ ಸೆಲೆಆದರೆ ನೋವುಣಿಸುತಲೇ ಬಂದಿರುವುದು,
ಆದರೆ ಅಧೀರಗೊಳಿಸುತಲೇ ಬಂದಿರುವುದು,
ನೀ ಬದುಕಿನ ಚೈತನ್ಯದ ಚಿಲುಮೆ
ಆದರೆ ಕುಗ್ಗಿಸುತಲೇ ನಡೆದಿರುವುದು,
ನೀ ಬದುಕಿನ ಅವಿಭಾಜ್ಯ ಅಂಗ
ಆದರೆ ಕಳಚಿಕೊಳುತಲೇ ಸಾಗಿರುವುದು,
ನೀ ಉಸಿರಿನ ಹೆಮ್ಮೆಯ ಹೆಸರು
ಅದ ತಲೆಯೆತ್ತದಷ್ಟು ಭಾರ ಮಾಡಿರುವುದು,
ನೀ ಬಂಧಗಳ ಗಳಿಕೆಯ ಗರಿಮೆ,
ಆದರೆ ಬರಿಗೈಯ್ಯಲುಳಿಸಿರುವುದು..
ವರವಾಗಿದ್ದೂ ಪ್ರಸಾದವಾಗಿ
ಈ ಬೊಗಸೆಗೆ ದಕ್ಕದಿರುವ ಪರಿ
ಜಗ ನಿನ್ನ ಸಂಭ್ರಮಿಸುವ ದಿನವೇ
ನಾ ನೆನೆಯುತಿರುವುದು
ವಿಪರ್ಯಾಸವೇ ಹೌದು.
ಇಲ್ಲಿಯ 'ನೀ'ಗೆ ನನ್ನ ಸಮೀಕರಣ ಭಗವಂತ. ಆಟ ಯಾವಾಗಲೂ ನನಗೆ 'ಹೋಗಲೇ' ಅನ್ನುವನೇ! :(
ReplyDeleteಓ! ನನ್ನ ಸಮೀಕರಣದ ಬಲ ಬದಿ ಸ್ನೇಹವಿತ್ತು..
Delete