Monday, July 15, 2013

ಬರಹದೊಳಗಿನ ಓಟ...

ಪೆನ್ನೇನು ಬರೆದೀತು
ತನ್ನೊಳಗಿನ ಶಾಯಿಯ ಕತೆ?!
ಬರೆವ ಸಾಧನವಷ್ಟೇ,
ಒಳಗನೆಲ್ಲೂ ಬಿಚ್ಚಿಡಲಾಗದು..
 
ಶಾಯಿ ಹಾಳೆಯ ತಾಗಲು,
ಹಾಳೆ ಅಕ್ಷರವನುಡಲು
ಅಕ್ಷರ ಕತೆಯ ತಲುಪಲು
ಬಯಸುತಲೋಡುತಲೇ ಇವೆ...
 
ಬರೆವವನ ಖಾಲಿಯಾಗುವಾಸೆಯ
ಓದುವವನ ತುಂಬಿಕೊಳುವಾಸೆ
ಬೆಂಬತ್ತಿದೆ...ಒಂದೂ ಸ್ಥಿರ ನಿಂತಿಲ್ಲ...
 
ಬರೆವಾಗ ಒಳಗಿದ್ದುದನು
ಅಲ್ಲಿಲ್ಲದ್ದರ ಹಿಂದಟ್ಟಿ,
ಓದುವಾಗ ಮುಂದಿದ್ದುದ
ಅಲ್ಲಿಲ್ಲದ್ದರ ಹಿಂದಟ್ಟಿ
ಮನಸೂ ಅಷ್ಟೇ
ಓಡುವೆಲ್ಲವುಗಳನೂ
ಬಿಡದೆ ಹಿಂಬಾಲಿಸುತಿದೆ....
 
 
 
 

1 comment:

  1. ತುಂಬಾ ನಿಜವಾದ ಕವನ. ಇಲ್ಲಿ ಇಳಿಸುವ ಸರಕು ಅಲ್ಲಿ ಸೆಳೆದುಕೊಳ್ಳುವ ಗಿರಾಕಿ!

    ReplyDelete