Saturday, July 6, 2013

**

ಬೆಳಕು ತಡವರಿಸುತ್ತಿದೆ..
ಬೊಗಸೆ ತುಂಬಾ ಸತ್ಯವಿರುವುದಕೆ,
ಅಡಗಿಸುವುದು ತಾನರಿತಿಲ್ಲದ್ದಕೆ,
ಮತ್ತದು ನನ್ನ ಬಲು ಪ್ರೀತಿಸುತಿರುವುದಕೆ...


---------------------- ನೀರಗುಳ್ಳೆಯಾಗುವಾಸೆ...
ಅರೆಕ್ಷಣ ಕಣ್ಹಾಯಿಸಿದರೆ ನಿರ್ವರ್ಣ.
ಮರುಕ್ಷಣ ಗಮನಿಸಿದರೆ ಮಳೆಬಿಲ್ಲಿನೆಲ್ಲ ಬಣ್ಣ.
ನೆಲನೀರುಗಾಳಿಗೆ ನೇರ ಸಲುವ ಗಟ್ಟಿತನ
ಇದ್ದೆಲ್ಲ ಏನಿಲ್ಲದ ನಿರ್ಭಾವುಕ ಚಲನವಲನ.
ಅಳುಕು-ತಳುಕಿರದ ಪಾರದರ್ಶಕ ಬಾಳಯಾನ
ಗಾಳಿಬೆರಳೂ ಮುಟ್ಟಲಂಜುವ ಸದೃಢ ಮಿದುತನ
ಕೆಲಕ್ಷಣದಲೆ ಇರುವ-ಇಲ್ಲದಿರುವ ಭ್ರಮೆಯಗಾಧತೆಯಲಿ ವಿಲೀನ.







1 comment:

  1. ಎರಡೂ ಚೆನ್ನಾಗಿವೆ. ಮನಸೆಳೆದ ಸಾಲು:
    ಇದ್ದೆಲ್ಲ ಏನಿಲ್ಲದ ನಿರ್ಭಾವುಕ ಚಲನವಲನ

    ReplyDelete