Saturday, March 30, 2013

ಅಹವಾಲು


-------------------
ಪ್ರೀತಿಸುವುದಾದರೆ ಎದುರು ಬಾ,
ಬರೀ ಬಯಕೆಯಾದರೆ ಬೇಡ.
ನಿನ್ನ ಕಣ್ಣಲಿ ಮನಸೇನೋ ಕಂಡಿದೆ,
ಕಣ್ಣು ಬೇರೇನೋ ತೋರುವುದು ಬೇಡೆನಗೆ.

ಪ್ರೇಮ ಮೂರ್ತಿಯಿಲ್ಲದ ದೇಗುಲ,
ದೇಹ ಕಂಭಗಳಾಗಿ ಭೌತಿಕ ಆಧಾರ..
ಆತ್ಮ ಪೂಜಿಪವು ಎರಡೂ ಪರಸ್ಪರ...
ಭಕ್ತಿ ದೀಪ, ನಂಬಿಕೆ ಧೂಪ, ಆರತಿಯಾರಾಧನೆ...
ನಡುವಿನಂತರ ಸ್ಥಿರ ಕಂಭಗಳಿಗೆ, ಆತ್ಮಗಳಿಗಲ್ಲ.
ಪೂಜೆ ಸೇತುವಾಗಲಿದೆ, ಮಿಲನ ದೂರವಿಲ್ಲ..
ವಾಸನೆಯ ಸೆಳೆತ ದೇಹದ ನಿತ್ಯಸತ್ಯ..
ಮಣಿದಪ್ಪಿದರೆ, ದೇಗುಲ ಬೀಳದೇನು?!

ತ್ಯಾಗ ಭ್ರಮೆ, ದೇಹಸುಖ ನಿತ್ಯವಿದರ್ಧ ಸತ್ಯ,
ತಪ್ಪು ಸೋಪಾನವೊಯ್ವ ಎತ್ತರವದು ಮಿಥ್ಯ.
ನಿಂತ ನೆಲೆಯಲಷ್ಟು ಭಾರ ನನ್ನ ಪಾಲು,
ನಾನೇ ಹೊರಬೇಕು ಕುಸಿವವರೆಗೂ..
ನನ್ನಂತೆಯೇ ನೀನು, ನಿನ್ನದೂ ಇರಬಹುದು.
ನಿಂತಲ್ಲೆ ನಿಂತು ದೇಗುಲವುಳಿಸಲಾಗದೇನು?!
ಜಗ ತುಳಿವ ಹಾದಿ ಮೆಟ್ಟದಪೂರ್ವ ಹೆಜ್ಜೆಯೇ
ವಿಭಿನ್ನ, ವಿಶಿಷ್ಠವಲ್ಲವೇನು?!



2 comments:

  1. ಪೊಳ್ಳು ಪ್ರೇಮಿಗೆ ಸವಾಲಿನ ಕವನ. 'ನಿಂತಲ್ಲೆ ನಿಂತು ದೇಗುಲವುಳಿಸಲಾಗದೇನು?!' ಎಂದು ಪ್ರಶ್ನಿಸುವ ನಿಮ್ಮ ಕಾವ್ಯದ ಹೂರಣ ತುಂಬಾ ಇಷ್ಟವಾಯಿತು.

    ReplyDelete
  2. ಕವನ ಓದಿ ಕಣ್ಣಲ್ಲಿ ನೀರು ಬಂತು,ಹ್ರಧಯ ತುಂಬಿ ಹರಿಯಿತು. ಈ ಕವನ ಬೆರೆದವರ ಸ್ತಳದಲ್ಲಿ ನಾ ನಿಂತು ಬರೆದ ಹಾಗೆ ಅನ್ನಿಸಿತು. ವಾಸ್ತವಿಕತೆಯ ಜೀವನ ವೇ ಬೇರೆ, ತೋರ್ಪಡೆಯ ಜೀವನವೇ ಬೇರೆ. ಆದರೆ ನಿಜವಾದ ಪ್ರೀತಿ ಎಂದಿಗೂ ಯಾರನ್ನೂ ತಪ್ಪಿತಸ್ತರನ್ನಾಗಿ ಮಾಡೊದಿಲ್ಲ ಎಲ್ಲ ವಿಧಿಯಾಟ ಎಂದು ಕೊಂಡು ಜೀವನವನ್ನು ಮುಳ್ಳಿನಿಂದ ಕೂಡಿದ ಕೆಂಪು ಗುಲಾಬಿಗೆ ಹೋಲಿಸಿಕೊಂಡು ಬದುಕಬಹುದು ಎಂಬುದು ನಾ ಕಂಡ ಅನುಭವದ ಸತ್ಯ.

    ReplyDelete