Thursday, September 19, 2013

ಕ್ಷಮಿಸು.

ದೈವಸಾನ್ನಿಧ್ಯದಲಿ
ಶರಣಾಗತಿಯಡಿ
ಕೈಗುದುರಿದ ಹೂ
ಬಾಡಿದ್ದರೆ, ನಿರ್ಗಂಧವಿದ್ದರೆ
ಹೂವಲ್ಲವೆನಿಸಿದರೂ
ಕಣ್ಣಿಗೊತ್ತಿಕೊಳುವಾಗ
ಪ್ರಶ್ನೆಯಿರುವುದಿಲ್ಲ,
ಕಲ್ಲ ಮೈಮೇಲಿದ್ದುದು
ಅದು, ಪ್ರಸಾದ.
 
ನಿನ್ನ ಸಾನ್ನಿಧ್ಯದಲಿ
ಅದೇ ಶರಣಾಗತಿಯಡಿ
ಎದೆಗುದುರಿದ ಹೂಭಾವ
ಗಡುಸಿದ್ದರೆ, ನಿರ್ಗಂಧವಿದ್ದರೆ,
ಹೂವಲ್ಲವೆನಿಸಿದರೆ,
ಕಣ್ಣಿಗೊತ್ತಿಕೊಳುವ ಯತ್ನಕೆ
ಎದುರಿವೆ ಬರೀ ಪ್ರಶ್ನೆ..
ನಿನ್ನೊಳಗಿಂದ ಬಂದಿದೆ
ಇದು, ಸಂಬಂಧ.

3 comments:

  1. ಅಕ್ಕಾ ಇದು ಯಾವುದಕ್ಕೆ ಮುಟ್ಟಿಸಿದ
    ಚುರುಕೋ ಗೊತ್ತಿಲ್ಲ......
    ಚಂದವಾಗಿದೆ....

    ಜೀವವಿರುವಲ್ಲೇ ಪ್ರಶ್ನೆಗಳಿರುವುದು....

    ನಿರ್ಜೀವವಿದ್ದಲ್ಲಿ ನಮ್ಮ ನಮ್ಮ ಮನಸ್ಸಿಗನಿಸಿದಂತೆ ಆಖ್ಯಾನ ಮಾತ್ರ......

    ReplyDelete
  2. oho bandyaa tammaa... missed u alot kano.

    ReplyDelete