Friday, May 31, 2013

ಅಭಿನಂದನೆ, ಅಭಿವಂದನೆ...


ಅಲ್ಲೆಲ್ಲೋ ಮಳೆಹನಿಯೊಂದು ಹುಟ್ಟಿ
ನೆಲದೊಡಲ ತಾಕಿದ ಆ ಕ್ಷಣಕೆ,

ಒಳಹೊಕ್ಕು ಅಡಗಿದ್ದ ನಿಧಿ ಶೋಧಿಸಿ
ಕಂಪಾಗಿಸಿ ಗಾಳಿ ಹೆಗಲೇರಿಸಿದ ವಿಧಿಗೆ,

ಮೈಲುಮೈಲು ಸಾಗಿ ಹೊತ್ತದ ತಂದಿಲ್ಲಿ
ನನ್ನೆದೆ ಹೊಗಿಸಿ ನವಿರೇಳಿಸಿದ ಗಾಳಿಗೆ,

ಬಾಯ್ದೆರೆದಿದ್ದ ಚಿಪ್ಪೊಂದು ಸ್ವಾತಿಹನಿಗೆ
ಮುತ್ತಾದಂತೆ ಅಲ್ಲರಳಿದ ಕಾವ್ಯ ಸಂಭ್ರಮಕೆ...

ಇದೋ ಉಸಿರುಸಿರಲೂ ಅಕ್ಷಯವಾಗುವ
ಅಭಿನಂದನೆ, ಅಭಿವಂದನೆ...

ಅದೇ ಗಳಿಗೆ ಮತ್ತೊಡಮೂಡುವ ಸೂಚನೆಯಲಿ,
ನಾಳೆಯ ನಸುಕದ ಹೊತ್ತು ತರುವ ಶಕುನದಲಿ,
ಕಾಯಲಾರದೆನ್ನೆದೆ ನೂರು ಮರುಹುಟ್ಟಿಗಾಗಿ
ಇಂದೇ ಹಾರೈಸಿಬಿಟ್ಟಿದೆ....

2 comments:

  1. ಅಲ್ಲಿ ಹನಿಯು ತಂದ ಮಣ್ಣ ಕಂಪಕೆ
    ಮೂಡಿದ ಅಕ್ಷರದ ವರ್ಷ ಪಸರಿಸಿದೆ
    ಮಣ್ಣ ಕಂಪ ದೂರ ದೂರಕೆ
    ಅರಳಿ ನಿಂತ ಮನ ಹರಸಿದೆ
    ನಮಿಸಿದೆ, ಕಲ್ಪನೆಗೆ ಮನಸೋತಿದೆ!

    ReplyDelete
    Replies
    1. ಆ ಸೋಲಿಗೆ ನನ್ನದೊಂದು ಶರಣು ಶೀಲಾ...

      Delete