Sunday, August 4, 2013

**

ನೀ ಬದುಕ ಕ್ಷಣಕ್ಷಣ ಸವಿಯುವ ಸಾಧನ
ಆದರೆ ನೋವುಣಿಸುತಲೇ ಬಂದಿರುವುದು
,
ನೀ ಬದುಕಿನ ಅದಮ್ಯ ಧೈರ್ಯದ ಸೆಲೆ
ಆದರೆ ಅಧೀರಗೊಳಿಸುತಲೇ ಬಂದಿರುವುದು
,
ನೀ ಬದುಕಿನ ಚೈತನ್ಯದ ಚಿಲುಮೆ
ಆದರೆ ಕುಗ್ಗಿಸುತಲೇ ನಡೆದಿರುವುದು,

ನೀ ಬದುಕಿನ ಅವಿಭಾಜ್ಯ ಅಂಗ
ಆದರೆ ಕಳಚಿಕೊಳುತಲೇ ಸಾಗಿರುವುದು
,
ನೀ ಉಸಿರಿನ ಹೆಮ್ಮೆಯ ಹೆಸರು
ಅದ ತಲೆಯೆತ್ತದಷ್ಟು ಭಾರ ಮಾಡಿರುವುದು
,
ನೀ ಬಂಧಗಳ ಗಳಿಕೆಯ ಗರಿಮೆ,
ಆದರೆ ಬರಿಗೈಯ್ಯಲುಳಿಸಿರುವುದು..
ವರವಾಗಿದ್ದೂ ಪ್ರಸಾದವಾಗಿ
ಈ ಬೊಗಸೆಗೆ ದಕ್ಕದಿರುವ ಪರಿ
ಜಗ ನಿನ್ನ ಸಂಭ್ರಮಿಸುವ ದಿನವೇ
ನಾ ನೆನೆಯುತಿರುವುದು
ವಿಪರ್ಯಾಸವೇ ಹೌದು.

2 comments:

  1. ಇಲ್ಲಿಯ 'ನೀ'ಗೆ ನನ್ನ ಸಮೀಕರಣ ಭಗವಂತ. ಆಟ ಯಾವಾಗಲೂ ನನಗೆ 'ಹೋಗಲೇ' ಅನ್ನುವನೇ! :(

    ReplyDelete
    Replies
    1. ಓ! ನನ್ನ ಸಮೀಕರಣದ ಬಲ ಬದಿ ಸ್ನೇಹವಿತ್ತು..

      Delete