ತಂತಿ ಮೇಲಿನ ಕೋಗಿಲೆ
ಕೂಗಿದೆ ಎಂದಿನಂತೆ.
ಒಡಕುದನಿ ಸೆಳೆದಿಲ್ಲ
ನಿನ್ನೆ-ಮೊನ್ನೆಯಂತೆ.
ಮೆಚ್ಚಿ ಅರಳುವ ಕಣ್ಣು-ಕಿವಿ,
ಕೂತು ಹಾಡುವ ನೆಲೆ,
ದನಿಯಂದದ ಸೆಲೆ
ಅದಕ್ಯಾವುದೂ ಅರಿವಿಲ್ಲ....
ಕೂಗುವುದಷ್ಟೇ ಗೊತ್ತದಕೆ.
ಹಸಿರಿದ್ದಾಗ ಸ್ವಲ್ಪ ಹೆಚ್ಚು
ಒಣಗಿದ್ದಾಗ ಸ್ವಲ್ಪ ಕಮ್ಮಿ
---------------------
ಜಡಿಮಳೆಯಲಿ ಛತ್ರಿಯಿಲ್ಲದೆ ನಡೆದ ಹಾದಿಕೂಗಿದೆ ಎಂದಿನಂತೆ.
ಒಡಕುದನಿ ಸೆಳೆದಿಲ್ಲ
ನಿನ್ನೆ-ಮೊನ್ನೆಯಂತೆ.
ಮೆಚ್ಚಿ ಅರಳುವ ಕಣ್ಣು-ಕಿವಿ,
ಕೂತು ಹಾಡುವ ನೆಲೆ,
ದನಿಯಂದದ ಸೆಲೆ
ಅದಕ್ಯಾವುದೂ ಅರಿವಿಲ್ಲ....
ಕೂಗುವುದಷ್ಟೇ ಗೊತ್ತದಕೆ.
ಹಸಿರಿದ್ದಾಗ ಸ್ವಲ್ಪ ಹೆಚ್ಚು
ಒಣಗಿದ್ದಾಗ ಸ್ವಲ್ಪ ಕಮ್ಮಿ
---------------------
ನುಡಿಸಿದ್ದೊಂದೇ ಮಾತು
"ಮಳೆಯಲಿ ನೆನೆಯುವುದರಷ್ಟು
ಮುದ ಇನ್ನೊಂದಿಲ್ಲ..."
ನಿನವಷ್ಟೂ ನುಡಿ ಹೊರಡಿಸಿದ ಧ್ವನಿ
ಹುಟ್ಟಿಸಿದ್ದೊಂದೇ ಮಾತು
"ಪ್ರೀತಿ ನನ್ನಲಿ ಬಲಿಯುತಲೇ ಸಾಗಿರುವಷ್ಟು
ಖಾತ್ರಿ ಇನ್ನೊಂದಿಲ್ಲ..."
1. ತಂತಿ ಮೇಲಿನ ಕೋಗಿಲೆ ಬಗ್ಗೆ ಕೂಗುವುದಷ್ಟೇ ಗೊತ್ತದಕೆ ಎನ್ನುತ್ತಾರೆ.
ReplyDelete2. ಮಳೆ ಛತ್ರಿ ಮತ್ತು ಪ್ರೀತಿಗಳ ಸಮೀಕರಣ ಒಪ್ಪವಾಗಿದೆ.