Thursday, July 18, 2013

ತಂತಿ ಮೇಲಿನ ಕೋಗಿಲೆ
ಕೂಗಿದೆ ಎಂದಿನಂತೆ.
ಒಡಕುದನಿ ಸೆಳೆದಿಲ್ಲ

ನಿನ್ನೆ-ಮೊನ್ನೆಯಂತೆ.
ಮೆಚ್ಚಿ ಅರಳುವ ಕಣ್ಣು-ಕಿವಿ,
ಕೂತು ಹಾಡುವ ನೆಲೆ,

ದನಿಯಂದದ ಸೆಲೆ
ಅದಕ್ಯಾವುದೂ ಅರಿವಿಲ್ಲ....
ಕೂಗುವುದಷ್ಟೇ ಗೊತ್ತದಕೆ.
ಹಸಿರಿದ್ದಾಗ ಸ್ವಲ್ಪ ಹೆಚ್ಚು
ಒಣಗಿದ್ದಾಗ ಸ್ವಲ್ಪ ಕಮ್ಮಿ

---------------------
ಜಡಿಮಳೆಯಲಿ ಛತ್ರಿಯಿಲ್ಲದೆ ನಡೆದ ಹಾದಿ
ನುಡಿಸಿದ್ದೊಂದೇ ಮಾತು
"ಮಳೆಯಲಿ ನೆನೆಯುವುದರಷ್ಟು

ಮುದ ಇನ್ನೊಂದಿಲ್ಲ..."
ನಿನವಷ್ಟೂ ನುಡಿ ಹೊರಡಿಸಿದ ಧ್ವನಿ
ಹುಟ್ಟಿಸಿದ್ದೊಂದೇ ಮಾತು
"ಪ್ರೀತಿ ನನ್ನಲಿ ಬಲಿಯುತಲೇ ಸಾಗಿರುವಷ್ಟು
ಖಾತ್ರಿ ಇನ್ನೊಂದಿಲ್ಲ..." 

1 comment:

  1. 1. ತಂತಿ ಮೇಲಿನ ಕೋಗಿಲೆ ಬಗ್ಗೆ ಕೂಗುವುದಷ್ಟೇ ಗೊತ್ತದಕೆ ಎನ್ನುತ್ತಾರೆ.
    2. ಮಳೆ ಛತ್ರಿ ಮತ್ತು ಪ್ರೀತಿಗಳ ಸಮೀಕರಣ ಒಪ್ಪವಾಗಿದೆ.

    ReplyDelete