Saturday, July 20, 2013

**

ಮೋಡ ಸರಿಯುತಿದೆ
ಚಂದ್ರ ತೆರೆಮರೆಯಿಂದೀಚೆ
ಬರಲಾರಂಬಿಸಿದ ಸುದ್ಧಿ...
ಮಾತಾಡಿಯಾನೇ, ನಕ್ಕಾನೇ,
ಸುರಿದೀತೇ ಚಂದ್ರಿಕೆ?!
ತುಸು ದೂರವಿದ್ದರೂ ಹುಣ್ಣಿಮೆ
ಎದುರು ನೋಡುತಿದೆ ಈ ರಾತ್ರಿ....
ಕ್ಷಣ ಯುಗವಾಗುತಿದೆ,
ಪಕ್ಷವಲ್ಲ, ವರ್ಷದಿಂದ ಕಾದಿರುವ ಇರುಳು...
ಕಾದಿದೆ ಗಾಢ ಕಪ್ಪಾಗಿ.
ಕಂಗಳ ದಾಹ ಹಿಂಗೀತೇ?
ಗಂಟಲಷ್ಟು ತಣಿದೀತೇ?
ಮನಸಷ್ಟು ತುಂಬೀತೇ?

2 comments:

  1. ಪ್ರತಿ ಸಾಯಿಂಕಾಲ ಉದ್ಭವಿಪ ಪ್ರಶ್ನೆಗಳು ಇಲ್ಲಿ ಕವನವಾಗುವ ಪರಿಯೇ ಸೋಜಿಗ!

    ReplyDelete