Friday, July 5, 2013

**



ದಣಿವು ಹೊತ್ತು ತಂದ ಹೆಗಲು,
ಶಬ್ಧಸಂತೆಯ ಮಾಲು ತುಂಬಿದ ಕಿವಿ,
ಬಣ್ಣದ ಗೋಜಲಿಗೆ ಭಾರ ರೆಪ್ಪೆ,
ಸಿಕ್ಕಿಸಿಕ್ಕಿದ್ದನೆಲ್ಲ ಹಿಂಬಾಲಿಸಿದ ಮನಸು.
ಒಟ್ಟಾರೆ ಒರಗಬಯಸಿದ ದೇಹ
ಮರಳಿವೆ ಎಂದಿನಂತೆ ಅಲ್ಲಿಗೇ...
ಕಿವಿಗೆ ಮೃದುಮೌನ, ಕಣ್ಣಿಗೆ ತಂಪು,
ಮನಸಿಗೆ ಶಾಂತಿ, ದೇಹಕೆ ವಿರಾಮ-
-ದುಡುಗೊರೆಯಿತ್ತು,
ಶಾಂತ ಮಡಿಲಲಿ ಭಾರವಿಳಿಸಿಕೊಂಡ
ತಾಯಿ ಸಂಜೆ...







2 comments:

  1. ಅಂತ ಸಂಜೆ ನಮಗೂ ಸಿಗಲಿ ಎಂದು ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಕವಿಯತ್ರಿ. :)

    ReplyDelete