ಮುಂದಿನ ಹೆಜ್ಜೆ
---------------
ನೀನಲ್ಲೇ ಇರುವೆಯೆಂದು ಚಾಚಿದ ಕೈ,
ಕಬಂಧ ಬಾಹುವಾಗುತಲೇ ಸಾಗಿದೆ.
ಹಿಂದುಳಿದದ್ದು ನೀನೋ, ಮುನ್ನಡೆದದ್ದು ನಾನೋ ..
ಕೈಯ್ಯ ಅಸ್ತಿತ್ವ ಶುರುವಾದಲ್ಲಿ ಉಳುಕಿನ ನೋವು.
ಹೊಂದಿದ್ದೆಲ್ಲ ಹಳೆಯ ಮಾತು,
ಅಂದೆಂಬುದೊಂದು ಕನಸು ಎನ್ನುತಿದೆ,
ಸುಳ್ಳ ಹಸೆಯೇರಿದ ಸುಖವುಣ್ಣೊ ಬಯಕೆ
ಆತ್ಮವಂಚನೆಯದಕೆ ಜೋಡಿಯಂತೆ.
ಇರುಳಲೂ ಕಾಣಿಸುವ ಬಾವಿ,
ಹಗಲಲಿ ಬಿದ್ದ ಪೆದ್ದುತನಕೇನು ಹೇಳಲಿ?
ಸಂಪರ್ಕಗಳೆಲ್ಲ ಸಂಬಂಧಗಳಾಗವು,
ಆಗಲೂಬಾರದೆಂಬುದ ಹೇಗೆ ಮನಗಾಣಿಸಲಿ?
ಮೆಚ್ಚುವಾಸೆ ಬಾಳನು ನಾ ನಾನೆಂಬ ನಿಜಕೆ,
ಸಂತಾನ, ಸಂಬಂಧ, ಅನುಬಂಧವೆಂದಲ್ಲ,
ಮುಂದಿನ ಹೆಜ್ಜೆಯತ್ತಲೇ, ಹೌದು, ತರಿದೆಲ್ಲ,
ಮನದೇಕಾಂತದ ಜೊತೆ ಮುಕ್ತ ವಿಕಾಸದೆಡೆಗೆ
---------------
ನೀನಲ್ಲೇ ಇರುವೆಯೆಂದು ಚಾಚಿದ ಕೈ,
ಕಬಂಧ ಬಾಹುವಾಗುತಲೇ ಸಾಗಿದೆ.
ಹಿಂದುಳಿದದ್ದು ನೀನೋ, ಮುನ್ನಡೆದದ್ದು ನಾನೋ ..
ಕೈಯ್ಯ ಅಸ್ತಿತ್ವ ಶುರುವಾದಲ್ಲಿ ಉಳುಕಿನ ನೋವು.
ಹೊಂದಿದ್ದೆಲ್ಲ ಹಳೆಯ ಮಾತು,
ಅಂದೆಂಬುದೊಂದು ಕನಸು ಎನ್ನುತಿದೆ,
ಸುಳ್ಳ ಹಸೆಯೇರಿದ ಸುಖವುಣ್ಣೊ ಬಯಕೆ
ಆತ್ಮವಂಚನೆಯದಕೆ ಜೋಡಿಯಂತೆ.
ಇರುಳಲೂ ಕಾಣಿಸುವ ಬಾವಿ,
ಹಗಲಲಿ ಬಿದ್ದ ಪೆದ್ದುತನಕೇನು ಹೇಳಲಿ?
ಸಂಪರ್ಕಗಳೆಲ್ಲ ಸಂಬಂಧಗಳಾಗವು,
ಆಗಲೂಬಾರದೆಂಬುದ ಹೇಗೆ ಮನಗಾಣಿಸಲಿ?
ಮೆಚ್ಚುವಾಸೆ ಬಾಳನು ನಾ ನಾನೆಂಬ ನಿಜಕೆ,
ಸಂತಾನ, ಸಂಬಂಧ, ಅನುಬಂಧವೆಂದಲ್ಲ,
ಮುಂದಿನ ಹೆಜ್ಜೆಯತ್ತಲೇ, ಹೌದು, ತರಿದೆಲ್ಲ,
ಮನದೇಕಾಂತದ ಜೊತೆ ಮುಕ್ತ ವಿಕಾಸದೆಡೆಗೆ
No comments:
Post a Comment