Saturday, February 2, 2013

ಸಾಮೀಪ್ಯಕಿಲ್ಲ ಪರೀಕ್ಷೆ, ವಿರಹಕಷ್ಟೇ...


ಪ್ರೇಮದಲಿಲ್ಲ ಪ್ರಶ್ನೆ, ಪರೀಕ್ಷೆಯಲಷ್ಟೇ..

--------------------------

ಕಾಡಿದರೆ ದೂರ ಎದೆಗವುಚಿದ್ದರ ಸಾಕ್ಷಿ

ಕಾಡದಿದ್ದರದು ಎದೆಗೂಡಿಂದ ಮುಕ್ತ ಪಕ್ಷಿ

----------------------------------

ನಿತ್ಯಸ್ತುತ್ಯ ಪ್ರೇಮದೇವ ಮತ್ತವನ ಲೀಲೆ

ತಿರುಗಿ ನೋಡದ ಹೆಜ್ಜೆ ಥೇಟ್ ಬಿಟ್ಟ ಶರಮಾಲೆ
----------------------------------------
ನೋವಿಗಳದ, ಕಣ್ಣೀರಿಗಂಜದ,


ನಗುವ ಬೆನ್ನಟ್ಟಿ ಎದುರಾದ ಹತಾಶೆಗಳುಕದ

ನಾನಿಲ್ಲವಾಗುವ, ನಿನ್ನೊಳಗೇ ಉಸಿರಾಡುವ

ನಿನ್ನೆಡೆಗಿನ ಮುಳ್ಳನಡಿಗೆಯೂ ಹಾಯೆನಿಸುವ

ಮೂರ್ಖತನದ ಪರಮಾವಧಿಯೇ ಪ್ರೇಮ


3 comments:

  1. ಅಲ್ಲ ಮೊದಲ ಪ್ರಶ್ನೆ ಈ ಭಗವಂತ ಪ್ರೇಮವನ್ನಷ್ಟೇ ಹುಟ್ಟಿಸದೇ ಜೊತೆಗೇಕೆ ವಿರಹವಿಟ್ಟ?

    ಸಾಮಗಗ ಈ ಸಾಮಗಾನ ಭೇಷ್ ಇದೆ...

    ReplyDelete