ನೀನೇ ನೀನೇ...ಬರೀ ನೀನೇ..
--------------
ಹೀಗಿರಬಹುದೇ ಸ್ವರ್ಗದ ವಸಂತ?
ನಿನ್ನಾಗಮನ, ನಿನದೊಂದು ನೋಟ,
ಅದರಲ್ಲಿ ತುಂಬಿದ ಪ್ರೀತಿಯ ಮಾಟ
ನಾ ಕಾದು ಬಂದ ಕ್ಷಣವ ತುಂಬಿದ ನೀನು,
ನಿನ್ನ ನಗುಮೊಗದ ಚಿತ್ರ...
ನಿನ್ನ ಕರೆ, ನುಡಿಯ ದನಿಯಾದ ಒಲವು,
ಅದರಲ್ಲಿ ತುಂಬಿದ ನೈಜತೆಯ ಚೆಲುವು
ನಾ ಕೇಳಿದ್ದು ನೀ ಹೇಳಿದ್ದು ಸವಿಸವಿಜೇನು,
ಎದೆಹಕ್ಕಿಯ ಚಿಲಿಪಿಲಿ ಗಾನ...
ನಿನ್ನ ಸಂದೇಶ, ಸಾರವಾದ ಪ್ರೇಮ,
ಅದರಲ್ಲಿ ತುಂಬಿದ ಸಮೃದ್ಧಿ ಅಸೀಮ,
ನಾ ಓದಿ, ಅರ್ಥೈಸಿದ್ದು-ನಿನಗೆ ನಾ, ನನಗೆ ನೀನು,
ಅಕ್ಷರವಲ್ಲದ ಭಾಷೆಯ ಮಾತು....
ನಿನ್ನೆದೆಯೊಳಗೆ ನಾನಿಣುಕಿದಾಗ,
ಸಂಶಯವ ಕಣ್ಣೀರು ತೊಳೆದು,
ದೃಷ್ಟಿಯ ಸತ್ಯ ಹಸನಾಗಿಸಿ,
ನಂಬಿಕೆಯ ದೇವಬೆಳೆ ಬಿತ್ತಿ,
ತಾಳ್ಮೆ ಹರಿಸಿ ಪೋಷಿಸಿ,
ನಳನಳಿಸುವ ಬಾಳನಂದನವೀಗ
ಒಳಹೊರಗೆಲ್ಲ ಬರೀ ಹಸಿರು..
ಹೀಗಿರಬಹುದೇ ಸ್ವರ್ಗದ ವಸಂತ?
--------------
ಹೀಗಿರಬಹುದೇ ಸ್ವರ್ಗದ ವಸಂತ?
ನಿನ್ನಾಗಮನ, ನಿನದೊಂದು ನೋಟ,
ಅದರಲ್ಲಿ ತುಂಬಿದ ಪ್ರೀತಿಯ ಮಾಟ
ನಾ ಕಾದು ಬಂದ ಕ್ಷಣವ ತುಂಬಿದ ನೀನು,
ನಿನ್ನ ನಗುಮೊಗದ ಚಿತ್ರ...
ನಿನ್ನ ಕರೆ, ನುಡಿಯ ದನಿಯಾದ ಒಲವು,
ಅದರಲ್ಲಿ ತುಂಬಿದ ನೈಜತೆಯ ಚೆಲುವು
ನಾ ಕೇಳಿದ್ದು ನೀ ಹೇಳಿದ್ದು ಸವಿಸವಿಜೇನು,
ಎದೆಹಕ್ಕಿಯ ಚಿಲಿಪಿಲಿ ಗಾನ...
ನಿನ್ನ ಸಂದೇಶ, ಸಾರವಾದ ಪ್ರೇಮ,
ಅದರಲ್ಲಿ ತುಂಬಿದ ಸಮೃದ್ಧಿ ಅಸೀಮ,
ನಾ ಓದಿ, ಅರ್ಥೈಸಿದ್ದು-ನಿನಗೆ ನಾ, ನನಗೆ ನೀನು,
ಅಕ್ಷರವಲ್ಲದ ಭಾಷೆಯ ಮಾತು....
ನಿನ್ನೆದೆಯೊಳಗೆ ನಾನಿಣುಕಿದಾಗ,
ಸಂಶಯವ ಕಣ್ಣೀರು ತೊಳೆದು,
ದೃಷ್ಟಿಯ ಸತ್ಯ ಹಸನಾಗಿಸಿ,
ನಂಬಿಕೆಯ ದೇವಬೆಳೆ ಬಿತ್ತಿ,
ತಾಳ್ಮೆ ಹರಿಸಿ ಪೋಷಿಸಿ,
ನಳನಳಿಸುವ ಬಾಳನಂದನವೀಗ
ಒಳಹೊರಗೆಲ್ಲ ಬರೀ ಹಸಿರು..
ಹೀಗಿರಬಹುದೇ ಸ್ವರ್ಗದ ವಸಂತ?
No comments:
Post a Comment