Thursday, February 21, 2013

ಕನಸಜಾಲ


-----------------

ನಿದ್ದೆಯಾವರಣದೊಳಗೆ ಕನಸು ಮೂಡುತಿತ್ತು

ಅರೆಬರೆ ಅರಿವಿನ ಜೋಪಾನ,

ಅರೆ ಮರೆವಿನ ಸೋಪಾನ



ಒಂದಷ್ಟು ನಗು, ಒಂದಷ್ಟು ಅಳು

ಒಂದಷ್ಟು ನಿಜ, ಮತ್ತಷ್ಟೇ ಸುಳ್ಳುಗಳು.

ಪರಿಚಿತ ಬಯಕೆ, ಅಪರಿಚಿತ ಆಸೆಗಳು

ನಮ್ಮವರು, ನಮ್ಮವರಲ್ಲದವರು

ಹಲ ಪದಾರ್ಥದಿ ನೇಯ್ವ ಕನಸ ಬಲೆ,

ಒಮ್ಮೊಮ್ಮೆ ಮುಂದುವರೆದು,

ಒಮ್ಮೊಮ್ಮೆ ತುಂಡಾಗಿ,

ಮನಸ ಜೇಡ ಹೆಣೆಯುತಲೇ ಸಾಗುವುದು,

ಭಾವಾನುಭವ ಒಳಗೆ ಬಂಧಿಯಾಗುವುದು.



ನಿದ್ದೆಯಳಿದಾಗ ಕಣ್ಣಷ್ಟೇ ಅಲ್ಲ,

ಮನಸೂ ವಾಸ್ತವತೆಯ ಬೆಳಕಲಿ ನೋಡುತ್ತದೆ-

ಭ್ರಮೆಯ ಪೊರೆ ಕಳಚಿದ ಹಾವೊಮ್ಮೆ,

ಭರವಸೆಯ ಸಂದೇಶದ ಓಲೆಯೊಮ್ಮೆ,

ಒಮ್ಮೊಮ್ಮೆ, ಅರ್ಥವಾಗದ ಅಚ್ಚರಿ ಕನಸು.

ಇಂದಿನೊಳಗಿನ ಬಂಧಕಲ್ಲಿ ಅದೇ ಪಾತ್ರ,

ನಿನ್ನೆಯದು ಇಂದಿಗಿಳಿದು ಬಡವಾದರೂ,

ಪುಷ್ಟಿಯಾದರೂ ಕನಸಲದಕೆ ನಿನ್ನೆಯದೇ ಪಾತ್ರ.

ಭಾವಭಾವಗಳ ಅಕಾರವಾಗಿಸುವ

ಹಂಸಕ್ಷೀರ ನ್ಯಾಯಕೆ,

ಅಂತರಾಳ ಮಾರ್ಗದರ್ಶಕ,

ಕನಸು ಚಿತ್ರಫಲಕ.







No comments:

Post a Comment