ನಿರುತ್ತರನವನಲ್ಲ...
------------------
ಗಾಳಿಬೀಸುವ ಶಬ್ಧವೂ ಮರೆ,
ಸ್ತಬ್ಧ ಜಗದೆಲ್ಲ ಚಲನವಲನ ..
ಕೂಗು, ಕರೆ, ಸಾರುವಿಕೆಯಿಲ್ಲ,
ಬ್ರಹ್ಮಾಂಡ ಹೊದ್ದಿದೆ ಮೌನ.
ಉಸಿರಾಟವೂ ನಿಂತಂತೆ,
ಪ್ರಾಣವಷ್ಟೇ ಒಳಗುಳಿದಂತೆ..
ಗಂಟೆ ಮುಳ್ಳೂ ದನಿಯುಡುಗಿ,
ಸಮಯವಷ್ಟೆ ನಿಶ್ಯಬ್ಧ ನಡೆದಂತೆ..
ಸಾಗರವೂ ಮೊರೆತ ನಿಲ್ಲಿಸಿ,
ಅಲೆ ಸದ್ದಿಲ್ಲದಾಡುವ ಪೋರನಂತೆ...
ನೋವು-ನಲಿವುಗಳು ಜೋಮುಗಟ್ಟಿ
ಮೈಮನ ಸ್ಪರ್ಶಹೀನವಾದಂತೆ..
ಜೀವನಾಡಿ ನುಡಿಸೊತ್ತು ಕಳವಾಗಿ,
ಅರ್ಥಾನರ್ಥಗಳು ಅಡಗಿಕೂತಂತೆ.
ಹಕ್ಕಿರೆಕ್ಕೆಬಡಿತವೂ ಬಾಯ್ಮುಚ್ಚಿ,
ಜಗದ ಶಬ್ಧನಿಧಿ ಕಳೆದುಹೋದಂತೆ.
ದೇವನುತ್ತರಿಸುವ ವೇಳೆ ಹೀಗಿರುವುದು
ಮುಚ್ಚಿ ಒಂದು, ಇನ್ನೊಂದು ತೆರೆವುದು
ಕಿವಿ-ಕಣ್ಣಿಗಲ್ಲ, ಅದೊಂದು ಭಾಸವಷ್ಟೇ.
ಅದೃಶ್ಯ ಭಾವಸೇತು ಅಲ್ಲಿಂದ ಆತ್ಮಕಷ್ಟೇ..
ನಿಜ, ಮೌನ ಕಗ್ಗಂಟು, ಸಿಕ್ಕು, ಅಸ್ಪಷ್ಟ.
ಇದ್ದುದು-ಇಲ್ಲದ್ದು ಹೊತ್ತ ಬರೀ ಗೊಂದಲ..
------------------
ಗಾಳಿಬೀಸುವ ಶಬ್ಧವೂ ಮರೆ,
ಸ್ತಬ್ಧ ಜಗದೆಲ್ಲ ಚಲನವಲನ ..
ಕೂಗು, ಕರೆ, ಸಾರುವಿಕೆಯಿಲ್ಲ,
ಬ್ರಹ್ಮಾಂಡ ಹೊದ್ದಿದೆ ಮೌನ.
ಉಸಿರಾಟವೂ ನಿಂತಂತೆ,
ಪ್ರಾಣವಷ್ಟೇ ಒಳಗುಳಿದಂತೆ..
ಗಂಟೆ ಮುಳ್ಳೂ ದನಿಯುಡುಗಿ,
ಸಮಯವಷ್ಟೆ ನಿಶ್ಯಬ್ಧ ನಡೆದಂತೆ..
ಸಾಗರವೂ ಮೊರೆತ ನಿಲ್ಲಿಸಿ,
ಅಲೆ ಸದ್ದಿಲ್ಲದಾಡುವ ಪೋರನಂತೆ...
ನೋವು-ನಲಿವುಗಳು ಜೋಮುಗಟ್ಟಿ
ಮೈಮನ ಸ್ಪರ್ಶಹೀನವಾದಂತೆ..
ಜೀವನಾಡಿ ನುಡಿಸೊತ್ತು ಕಳವಾಗಿ,
ಅರ್ಥಾನರ್ಥಗಳು ಅಡಗಿಕೂತಂತೆ.
ಹಕ್ಕಿರೆಕ್ಕೆಬಡಿತವೂ ಬಾಯ್ಮುಚ್ಚಿ,
ಜಗದ ಶಬ್ಧನಿಧಿ ಕಳೆದುಹೋದಂತೆ.
ದೇವನುತ್ತರಿಸುವ ವೇಳೆ ಹೀಗಿರುವುದು
ಮುಚ್ಚಿ ಒಂದು, ಇನ್ನೊಂದು ತೆರೆವುದು
ಕಿವಿ-ಕಣ್ಣಿಗಲ್ಲ, ಅದೊಂದು ಭಾಸವಷ್ಟೇ.
ಅದೃಶ್ಯ ಭಾವಸೇತು ಅಲ್ಲಿಂದ ಆತ್ಮಕಷ್ಟೇ..
ನಿಜ, ಮೌನ ಕಗ್ಗಂಟು, ಸಿಕ್ಕು, ಅಸ್ಪಷ್ಟ.
ಇದ್ದುದು-ಇಲ್ಲದ್ದು ಹೊತ್ತ ಬರೀ ಗೊಂದಲ..
ಒಳಹೊಕ್ಕಿ ತಾಳ್ಮೆಬಳಸಿ ತಡೆಯ ತರಿದು
ಗುಪ್ತನಿಧಿ ಆ ಉತ್ತರದ ಬಳಿಸಾರಬೇಕು.
ನಿರುತ್ತರನವನಲ್ಲ, ನಾವು ಕೇಳಿಸಿಕೊಳ್ಳುತಿಲ್ಲ,
ನಿಷ್ಕಾರುಣನಲ್ಲ, ಮಮತೆ ನಾವುಣ್ಣುತಿಲ್ಲ,
ಆನುಭವದೂರನಲ್ಲ, ನಾವವನ ಸಾರುತಿಲ್ಲ,
ಮೇಲೆಲ್ಲೂ ಕೂತಿಲ್ಲ, ನಾವೊಳ ಸೇರಿಸುತ್ತಿಲ್ಲ.
No comments:
Post a Comment