ಹೀಗೊಂದು ಗಳಿಗೆ.
----------------
ಹಾರಿಬಂದ ಪುಕ್ಕ ಪಕ್ಕ ಕೂತಿತು,
ಬಳಿಸಾರಿತು, ಮೆಲ್ಲ ಮೈಯೇರಿತು,
ನೇವರಿಸಿತು, ಕಚಗುಳಿಯಿಟ್ಟಿತು,
ಮುದ್ದುಮುದ್ದಾಗಿ ಪಿಸುಗುಟ್ಟಿತು..
ಹಾರಿಬಂದ ಚಂದಕೋ, ಬಣ್ಣದಂದಕೋ,
ನವಿರು ಸ್ಪರ್ಶಕೋ, ಮುಕ್ತ ಸ್ನೇಹಕೋ,
ಮೈಮರೆಯಿತು, ಮನಸೊಪ್ಪಿತು..
ಕ್ಷಣಗಳಲದು ಪ್ರೀತಿಪಾತ್ರವಾಯಿತು.
ನಗುತಿರುವಂತಿತ್ತು, ನಗಿಸಿತು..
ಕಣ್ಣರೆಪ್ಪೆ ಮುಟ್ಟಿತು, ಕಣ್ಣೊರೆಸಿತು..
ತುಟಿ ಬಿಡಿಸಿ, ಮೌನವ ಮಾತಾಗಿಸಿತು..
ಕೆನ್ನೆ ಸವರಿ, ಕುಳಿಯ ಚೆಲುವು ತುಂಬಿತು..
ಕೈಯ್ಯಲಿಟ್ಟು ದಿಟ್ಟಿಸಿತು ಕಣ್ಣು,
ಅಲ್ಲೂ ಹನಿ ಕಣ್ಣೀರಿತ್ತು,
ಕಿತ್ತಲ್ಪಟ್ಟ ನೋವಿತ್ತು,
ಒಂಟಿತನದ ಅಳಲಿತ್ತು.
ಸ್ವತಂತ್ರವದರ ಬಾಳ್ವೆ,
ಬಂಧನದ ಬಯಕೆ.
ಬಂಧದಲಿ ತೊಳಲುವೆಮಗೆ,
ಸ್ವಾತಂತ್ರ್ಯದ ಆಸೆ.
ತೊರೆಯಲ್ಪಟ್ಟದ್ದು,
ಹಾತೊರೆದು ನನ್ನ ಸಂಗ ಸಾರಿತು..
ನೂರು ಸಂಗಗಳ ನಡುವೆ ನನಗೆ,
ಒಂಟಿಪುಕ್ಕ ಆಪ್ತವೆನಿಸಿತು..
----------------
ಹಾರಿಬಂದ ಪುಕ್ಕ ಪಕ್ಕ ಕೂತಿತು,
ಬಳಿಸಾರಿತು, ಮೆಲ್ಲ ಮೈಯೇರಿತು,
ನೇವರಿಸಿತು, ಕಚಗುಳಿಯಿಟ್ಟಿತು,
ಮುದ್ದುಮುದ್ದಾಗಿ ಪಿಸುಗುಟ್ಟಿತು..
ಹಾರಿಬಂದ ಚಂದಕೋ, ಬಣ್ಣದಂದಕೋ,
ನವಿರು ಸ್ಪರ್ಶಕೋ, ಮುಕ್ತ ಸ್ನೇಹಕೋ,
ಮೈಮರೆಯಿತು, ಮನಸೊಪ್ಪಿತು..
ಕ್ಷಣಗಳಲದು ಪ್ರೀತಿಪಾತ್ರವಾಯಿತು.
ನಗುತಿರುವಂತಿತ್ತು, ನಗಿಸಿತು..
ಕಣ್ಣರೆಪ್ಪೆ ಮುಟ್ಟಿತು, ಕಣ್ಣೊರೆಸಿತು..
ತುಟಿ ಬಿಡಿಸಿ, ಮೌನವ ಮಾತಾಗಿಸಿತು..
ಕೆನ್ನೆ ಸವರಿ, ಕುಳಿಯ ಚೆಲುವು ತುಂಬಿತು..
ಕೈಯ್ಯಲಿಟ್ಟು ದಿಟ್ಟಿಸಿತು ಕಣ್ಣು,
ಅಲ್ಲೂ ಹನಿ ಕಣ್ಣೀರಿತ್ತು,
ಕಿತ್ತಲ್ಪಟ್ಟ ನೋವಿತ್ತು,
ಒಂಟಿತನದ ಅಳಲಿತ್ತು.
ಸ್ವತಂತ್ರವದರ ಬಾಳ್ವೆ,
ಬಂಧನದ ಬಯಕೆ.
ಬಂಧದಲಿ ತೊಳಲುವೆಮಗೆ,
ಸ್ವಾತಂತ್ರ್ಯದ ಆಸೆ.
ತೊರೆಯಲ್ಪಟ್ಟದ್ದು,
ಹಾತೊರೆದು ನನ್ನ ಸಂಗ ಸಾರಿತು..
ನೂರು ಸಂಗಗಳ ನಡುವೆ ನನಗೆ,
ಒಂಟಿಪುಕ್ಕ ಆಪ್ತವೆನಿಸಿತು..
No comments:
Post a Comment