ಗಾಳಿಗಿಂತ ಹಗುರ ಮತ್ತು ಕಲ್ಲಿಗಿಂತ ಭಾರ
ಹೂವಿನಂತೆ ಸೊಗಸು ಮತ್ತು ಮುಳ್ಳಿನಂತೆ ಚೂಪು
ಭೂಮಿಯಂತೆ ಮೌನ ಮತ್ತು ಗುಡುಗಿನಂತೆ ಜೋರು
ಒಮ್ಮೊಮ್ಮೆ ಪ್ರತ್ಯಕ್ಷ ಮತ್ತೊಮ್ಮೆ ಅಡಗಿದಂತೆ
ಒಮ್ಮೊಮ್ಮೆ ಅರ್ಪಣೆ ಒಮ್ಮೊಮ್ಮೆ ಹೀರುವಂತೆ
ಒಮ್ಮೊಮ್ಮೆ ಉತ್ಕರ್ಷ ಒಮ್ಮೊಮ್ಮೆ ಪಾತಾಳಮುಖಿ
ಅವಲಂಬನೆಯ ನೆರಳೇ ನಿರಾಕರಣೆಯಾದಂತೆ
ಅನುನಯದ ದನಿಯೇ ಆಪಾದನೆಯೆಂಬಂತೆ
ಸಾಮೀಪ್ಯ ಬಯಸುವ ವಿಮುಖತೆಯಂತೆ
ಬರೀ ಗೋಜಲಾಗಿರುವದರ ಬೆನ್ನಟ್ಟಿ
ಇಲ್ಲಿಯವರೆಗೂ ಬಂದಾಯ್ತು,
ಮುಟ್ಟಿದ ಭ್ರಮೆಗೆ ನೈವೇದ್ಯವಾಗಿದ್ದಾಯ್ತು..
ಈಗೊಂದು ಪ್ರಶ್ನೆ..
ನಾ ಬೆನ್ನಟ್ಟಿದ್ದೇನನ್ನು,
ನನ್ನ ಮುನ್ನಡೆಸಿದ್ದೇನು,
ಮುಟ್ಟಿದ್ದೇ ಹೌದಾದರೂ, ಅಲ್ಲವಾದರೂ
ತಾಕಿದ ನಿಜವೇನು???
ತುಂಬಾ ಗಾಢವಾದ ಪರಿಣಾಮ ಬೀರಿದ ಸಾಲುಗಳು:
ReplyDeleteಒಮ್ಮೊಮ್ಮೆ ಪ್ರತ್ಯಕ್ಷ ಮತ್ತೊಮ್ಮೆ ಅಡಗಿದಂತೆ
ಒಮ್ಮೊಮ್ಮೆ ಅರ್ಪಣೆ ಒಮ್ಮೊಮ್ಮೆ ಹೀರುವಂತೆ
ಒಮ್ಮೊಮ್ಮೆ ಉತ್ಕರ್ಷ ಒಮ್ಮೊಮ್ಮೆ ಪಾತಾಳಮುಖಿ