ಹೊಗೆ ನೋಡಿ ನಿರ್ಧರಿಸಬೇಡ
ಸುಡುವ ಬೆಂಕಿಯಂತರಾಳದಂತೆ
ಕೊರೆವ ಮಂಜುಗೆಡ್ಡೆಯದೂ ಹೊಮ್ಮಿಸಬಲ್ಲುದು.
ಹಾಗೇ ಸುಮ್ಮನೆ ಸೋಕಲು ಬಿಡು
ಅದೇ ಮುಟ್ಟೀತು..
ನೇರ ಕಣ್ಣ ದಾಟಿ ತೊಗಲ ತಲುಪಲಿ..
ಆ ಸ್ಪರ್ಶವದನರಿತೀರು...
ಸುಲಭಸಾಧ್ಯ ಸತ್ಯದ ವ್ಯಾಖ್ಯೆ ನಂಬಬೇಡ
ನಿಷ್ಠೆಯುದರದ ಆಸ್ತಿಯಂತೆ
ಮೋಸದ ತಟ್ಟಿರಾಯನೊಳಗೂ ಇದ್ದೀತು
ಅದೇ ನುಡಿದೀತು...
ಪಂಚೇಂದ್ರಿಯವ ಮೀರಿದ್ದದ ಕೇಳಲಿ
ಆ ಆತ್ಮವದನರಿತೀತು...
No comments:
Post a Comment