ನಿಮ್ಮಿಬ್ಬರ ಪ್ರೀತಿ ಏನು ಅರ್ಥೈಸುತ್ತೀ
ನನ್ನ ಜಗಕೆ?!
ಕುರುಡಗೆ ಚಂದ್ರನಂದ ಬಣ್ಣಿಸಿ ನೋಡು ಅಂದಂತೆ.
ಅತ್ತ ಚಾಚಿದ ನಿನ್ನ ತೋರುಬೆರಳು
ಕುರುಡುತನವನಷ್ಟೇ ಅರ್ಥೈಸುವುದು
ಚಂದ್ರಿಕೆಯ ತಂಪು ಮೈಗಡರಿ ಮತ್ತೆ
ಅಸಹಾಯಕತೆಯನಷ್ಟೇ ಅರ್ಥೈಸುವುದು
--------------------------------
ಎಂದಿಗೂ ಅವನು ಇವನಾಗನು
ಬೆಳಕವನದು, ಕತ್ತಲಿವನದು.
ಅವನಿಲ್ಲದಾಗ ಇವಗೆ ಕಣ್ಮುಚ್ಚಿದವ
ಹಗಲ ಕಾಣ್ಕೆಯನಷ್ಟೇ ನಂಬಿ,
ರಾತ್ರಿಯ ನಿಜದಿಂದ ವಂಚಿತ
--------------------------------
ನೂರೆಳೆಗಳ ಸಿಕ್ಕು ಬಿಡಿಸಲೆತ್ತಿಕೊಂಡ ಕಡ್ಡಿಯಲೊಂದೆಳೆ ಅಡಗಿತ್ತು
ಬಿಡಿಸುತ್ತಾ ಸಿಕ್ಕನು ಕಗ್ಗಂಟು ಮಾಡಿದೆಳೆಯಷ್ಟೇ ಉಳಿದು,
ಕಡ್ಡಿ ಕಳೆದೇ ಹೋಯಿತು
---------------------------
ಕುರುಡನ ಕಣ್ಣೀರು ಕಾಣಲಾರದ ಚಂದಕರ್ಪಿತ
ಅದಲ್ಲದವನದು ಕಂಡ ಚಂದದ ಕುರೂಪಕೆ.
ಕಾಣ್ಕೆಯನ್ನು ನಂಬಿ ಕನಸನ್ನ ಮರೆತರೆ....ಬದುಕಿಗೆರಡೂ ಬೇಕಲ್ಲವೇ ?
ReplyDeleteಹೌದಲ್ಲವೇ , ಕಾಣಲಾರೆನೆಂದು ಆಳುವ ಕುರುಡ ಕಂಡ ಕುರೂಪವ ಸಹಿಸಲಾರದ ನೋಡುಗ ಒಂದು ಹಂತದಲ್ಲಿ ಇಬ್ಬರ ನೋವೂ ಸಮ.