ಕನಸೇನಾದಾವು?!
-----------------
"ಮುಟ್ಟಬೇಡ" ಅಮ್ಮನ ಕೂಗು,
ಮುಟ್ಟುವೆನೆಂದು ರಚ್ಚೆ ಹಿಡಿವ ನನ್ನ ಅಳು
ಕನಸಾಗಿ ಬಂದು ಕಾಡುತ್ತವೆ..
ಮುದ್ದೆ ಮಾಡಿ ಅಮ್ಮ ತೋಡಿಗೆಸೆದ
ಕಲೆಗೆ ಕಳೆಗಟ್ಟಿದ ಕೆನೆಬಣ್ಣದ ಪ್ರೀತಿಯ ಅಂಗಿ
ಮತ್ತೆ ಮತ್ತೆ ಕನಸಾಗಿ ಬಂದು ಕಾಡುತ್ತದೆ...
ಮೂಲೆಯ ಉಪ್ಪರಿಗೆ ಮೆಟ್ಟಿಲ ಕತ್ತಲಲಿ,
ಅಜ್ಜನ ಪೂಜೆಯ ಘಂಟೆ ನಿಲ್ಲುವವವರೆಗೆ
ತಡೆಹಿಡಿದ ಭಯದುಸಿರ ಕನಸಿಗೆ ಕಣ್ಣಗುಡ್ದೆ ಮೇಲು...
ಹೊಟ್ಟೆ ನೋವಿನ ತಳಮಳ ಶಮನಕೆ
ಗೋಡೆಗಂಟಿ ಮುರುಟಿ ಮಲಗುವಾಸೆ
ಮಲಗಲು ಅಲ್ಲದ ಹೊತ್ತೆನುವ ಅಪ್ಪನ ದನಿಯ ಕನಸು..
ಮಾತ್ರೆಗೆ ಬಗ್ಗದ ಆ ದಿನದಾರ್ಭಟ
ಮನೆಯೆಲ್ಲ ಶುಭಗಳಲೂ ಹಾಜರೀವ ಇರಿಸುಮುರುಸು
ಕನಸಲೂ ರಕ್ತ ಒಸರುವಂತೆ ಚಿವುಟುವುದು....
ಬಗೆಬಗೆ ಬಣ್ಣದ ಹೊದಿಕೆಯಡಿಯ ಪ್ಯಾಡ್
ಒಗೆದೊಣಗಿಸುವ ಅದೇ ಮಾಸಿದ ಬಟ್ಟೆತುಂಡು
ಕನಸಲಿ ಒಂದನೊಂದು ಬೆನ್ನಟ್ಟಿ ಓಡುವವು..
ಮಿತಿಮೀರಿದ ಬೆವರು, ಮೈಬಿಸಿ, ಆತಂಕ
ಹೀಗೇ ಇನ್ನೇನೋ ವಿನಾಕಾರಣ ಕಾಯಿಲೆಗೆ
ಮುಟ್ಟು ನಿಲ್ಲುವುದರಾರಂಭ ಎಂದರಾಕೆ..
ನಾ ಕೇಳಿದ್ದಿಷ್ಟೇ...
"ಕನಸುಗಳಿನ್ನು ಕರಗಿಯಾವೇ;
ಇಲ್ಲ ಗಾಢವಾದಾವೇ?!"
-----------------
"ಮುಟ್ಟಬೇಡ" ಅಮ್ಮನ ಕೂಗು,
ಮುಟ್ಟುವೆನೆಂದು ರಚ್ಚೆ ಹಿಡಿವ ನನ್ನ ಅಳು
ಕನಸಾಗಿ ಬಂದು ಕಾಡುತ್ತವೆ..
ಮುದ್ದೆ ಮಾಡಿ ಅಮ್ಮ ತೋಡಿಗೆಸೆದ
ಕಲೆಗೆ ಕಳೆಗಟ್ಟಿದ ಕೆನೆಬಣ್ಣದ ಪ್ರೀತಿಯ ಅಂಗಿ
ಮತ್ತೆ ಮತ್ತೆ ಕನಸಾಗಿ ಬಂದು ಕಾಡುತ್ತದೆ...
ಮೂಲೆಯ ಉಪ್ಪರಿಗೆ ಮೆಟ್ಟಿಲ ಕತ್ತಲಲಿ,
ಅಜ್ಜನ ಪೂಜೆಯ ಘಂಟೆ ನಿಲ್ಲುವವವರೆಗೆ
ತಡೆಹಿಡಿದ ಭಯದುಸಿರ ಕನಸಿಗೆ ಕಣ್ಣಗುಡ್ದೆ ಮೇಲು...
ಹೊಟ್ಟೆ ನೋವಿನ ತಳಮಳ ಶಮನಕೆ
ಗೋಡೆಗಂಟಿ ಮುರುಟಿ ಮಲಗುವಾಸೆ
ಮಲಗಲು ಅಲ್ಲದ ಹೊತ್ತೆನುವ ಅಪ್ಪನ ದನಿಯ ಕನಸು..
ಮಾತ್ರೆಗೆ ಬಗ್ಗದ ಆ ದಿನದಾರ್ಭಟ
ಮನೆಯೆಲ್ಲ ಶುಭಗಳಲೂ ಹಾಜರೀವ ಇರಿಸುಮುರುಸು
ಕನಸಲೂ ರಕ್ತ ಒಸರುವಂತೆ ಚಿವುಟುವುದು....
ಬಗೆಬಗೆ ಬಣ್ಣದ ಹೊದಿಕೆಯಡಿಯ ಪ್ಯಾಡ್
ಒಗೆದೊಣಗಿಸುವ ಅದೇ ಮಾಸಿದ ಬಟ್ಟೆತುಂಡು
ಕನಸಲಿ ಒಂದನೊಂದು ಬೆನ್ನಟ್ಟಿ ಓಡುವವು..
ಮಿತಿಮೀರಿದ ಬೆವರು, ಮೈಬಿಸಿ, ಆತಂಕ
ಹೀಗೇ ಇನ್ನೇನೋ ವಿನಾಕಾರಣ ಕಾಯಿಲೆಗೆ
ಮುಟ್ಟು ನಿಲ್ಲುವುದರಾರಂಭ ಎಂದರಾಕೆ..
ನಾ ಕೇಳಿದ್ದಿಷ್ಟೇ...
"ಕನಸುಗಳಿನ್ನು ಕರಗಿಯಾವೇ;
ಇಲ್ಲ ಗಾಢವಾದಾವೇ?!"
ನೆನಪುಗಳನ್ನು ಕೆಡುಕಿ ಹಾಕಿದೀರಿ ಮೇಡಂ.
ReplyDeletehmmmm.....
Deleteಹೆಣ್ಣಿನ ನೋವಿಗೆ ಕಾರಣವಾಗುವ ಸಂಗತಿ ಹೆಣ್ಣೆಂಬುದರ ಮುಖ್ಯ ಗುರುತು
ReplyDeleteಪ್ರಕೃತಿಯ ವಿಡಂಬನೆಯೇ ? ಮುಟ್ಟಲಾರದವರ ಅಳಲು ಅರ್ಥವಾಗೋದು ಇಂಥಾ ದಿನಗಳಲ್ಲೇ