ಆಕಾಶ ನೋಡು..
ಸೂರ್ಯ ಚಂದ್ರ ತಾರೆ
ಮಿಂಚು ಮೋಡ ಮಳೆಬಿಲ್ಲು ಹೀಗೇ
ಎಷ್ಟೆಲ್ಲ ತನದೇ ಆಗಿದ್ದರೂ
ಒಮ್ಮೊಮ್ಮೆ ಅವಿರಲೇ ಇಲ್ಲವೆಂಬಂತೆ
ಬರೀ ನೀಲಿ ಖಾಲಿಖಾಲಿ.
ಸಾಗರ ನೋಡು..
ಮುತ್ತು ರತ್ನ ಉಪ್ಪು
ಮೀನು ಮೊಸಳೆ ಹಾವು ಹೀಗೇ
ಎಷ್ಟೆಲ್ಲ ತನ್ನಾಸ್ತಿಯಿದ್ದರೂ
ಓಡಿ ಬರುವುದು ಮರಳೇ ಮಿಗಿಲೆಂಬಂತೆ
ದಡದ ಸ್ಪರ್ಶ ಬೇಡಿ.
ನಾನು ನೋಡು..
ನೀನು, ಅವಳು, ಅವನು
ಬಯಸಿ ಪಡೆದ, ಬಯಸದೊದಗಿದ ಹೀಗೇ
ಎಷ್ಟೆಲ್ಲ ಸಂಬಂಧಗಳಿದ್ದರೂ
ಒಟ್ಟಾರೆ ಅದೆಲ್ಲ ಭ್ರಮೆಯೆಂಬಂತೆ
ಒಮ್ಮೊಮ್ಮೆ ಆ ಆಕಾಶ, ಒಮ್ಮೊಮ್ಮೆ ಆ ಕಡಲು.
ಮನಸ್ಸಿಗೆ ತಟ್ಟಿತು ಮತ್ತು ಮೌನವಾಯಿತು ಅನು! ಇದಕ್ಕಿಂತ ಹೆಚ್ಚು ಹೇಳಲು ಗೊತ್ತಿಲ್ಲ. ನನ್ನ ಮಿತಿಯಲ್ಲಿ ಇದನ್ನು ಅರ್ಥ ಮಾಡಿಕೊಂಡಿದ್ದೇನೆ. ಹೆಪ್ಪುಗಟ್ಟಿದ ಭಾವಕ್ಕೆ ತಂಗಾಳಿ ಬೀಸಿದಂತಾಯಿತು.
ReplyDeleteಬರಹ ನಿಮ್ಮಂಥವರ ಮನಸಿಗೆ ತಟ್ಟಿದರೆ ಅದರ ಹುಟ್ಟು ಸಾರ್ಥಕ ಶೀಲಾ.
Delete