Thursday, June 20, 2013

ನಿನಗೂ ..

ಸೊಟ್ಟ ನೆಟ್ಟ ದೃಷ್ಟಿಯ ಪರೀಕ್ಷೆ
ಪಾಸು ಮಾಡಬೇಕಿಲ್ಲ ಈ ಸ್ಪಂದನೆ
ಸತ್ಯಾಸತ್ಯದ ಸಾಪೇಕ್ಷತೆಯ ಸಾಮ್ರಾಜ್ಯ
ಮೀರಿದ ಪರೀಕ್ಷಕನ ತಲುಪಿದರೆ ಸಾಕು.

ತಾ ಕಾಣದ್ದೆಲ್ಲ ಸುಳ್ಳೆನುವ ಹಾದಿ
ಹಾದು ಹೋಗಬೇಕಿಲ್ಲ ಈ ಪ್ರಾರ್ಥನೆ
ನೇರ ತಿರುಳ ನೆಚ್ಚುವವನೇ
ನನಗೆ ಸದಾ ಕಿವಿಗೊಡುವ ದೊರೆ...

ಜಗವೇ,
ಎದೆಗಿಳಿವ ಬಾಣವೆಸೆದು ನಗುವ,
ಬಿತ್ತಿದ ಬೆಳೆಗಳುವ,
ನಿಷ್ಠೆಯ ಸಂಶಯಿಸುವ,
ದ್ವೇಷಕೊದಗಿ ಪ್ರೀತಿ ಕೇಳುವ,
ನಿನ್ನ ಪರಿಗೆ ಧಿಕ್ಕಾರವಲ್ಲ,
ನನ್ನ ಮರುಕವಿದೆ, ಇದೋ...
ಅದೇ ಆತನಲಿ ನಿನಗೂ ನನದೊಂದು
ಉದ್ಧರಿಸೆನುವ ಪ್ರಾರ್ಥನೆಯಿದೆ...

3 comments:

  1. ಜಗದಗಲ ಹರಡಲಾಗದ ಕೈಗಳಲ್ಲಿ ಜಾಗದಲ್ಲಿರುವಲ್ಲಿಯೇ ಜಗದ ಜನರಿಗೆ ಪ್ರಾರ್ಥಿಸುವ ಕೈಗಳ ಪ್ರಾರ್ಥನೆ
    ಸೊಗಸಾಗಿದೆ

    ReplyDelete
    Replies
    1. ಭಾವಶರಧಿಗೆ ಸ್ವಾಗತ ಶ್ರೀಕಾಂತ್ ಅವರೇ.. ಧನ್ಯವಾದಗಳು..

      Delete
  2. ಇಡೀ ಕವನದ ಭಾವ ನೋವಿನ ಸಾಂಧ್ರ.
    ದ್ವೇಷಕೊದಗಿ ಪ್ರೀತಿ ಕೇಳುವ,
    ನಿನ್ನ ಪರಿಗೆ ಧಿಕ್ಕಾರವಲ್ಲ,
    ನನ್ನ ಮರುಕವಿದೆ,
    ತುಂಬಾ ತಟ್ಟಿದವು.

    ReplyDelete