Saturday, June 22, 2013

ಗಂಗಮ್ಮಾ...

ಅಲ್ಲಲ್ಲಿ ನೀನು ಮುತ್ತಿಟ್ಟು ಏಳಿಸುವ
ನಸುಕಿನಮ್ಮನ ನಸುನಗುವಂತೆ ಶಾಂತ.

ಇನ್ನಲ್ಲಲ್ಲಿ ದಾಟಿ ಹೋಗದಂತುಳಿಸುವ
ಅಮ್ಮನ ಕಣ್ಣ ಪ್ರವಾಹದಂತೆ ಜುಳುಜುಳು.

ಮತ್ತಲ್ಲಲ್ಲಿ ಬಿದ್ದ ಗಾಯದುರಿಯ
ಜೊತೆ ನಾ ನಂಜಿಕೊಳಲೆಂಬಂತೆ
ಉದುರುವ ಅಮ್ಮನ ಕಿಡಿನುಡಿಯಂತೆ
ಚಟಪಟ...ಸುರುಸುರು.

ಒಮ್ಮೊಮ್ಮೆ ಮಾತ್ರ
ನನನಾಡಿಕೊಂಡೆಡೆಗೆ ಸಿಡಿಯುವ
ಅವಳ ಭಾವ-ಮೇಘಸ್ಫೋಟದ ಹಾಗೆ
ಶಬ್ಧ-ವಿವರಣೆಯ ಮೀರಿದಂತೆ ರೌದ್ರ...

ಆದರೆ ಸುರುವಿಂದ ಕೊನೆಯಿರದವರೆಗೆ
ಉದ್ದುದ್ದಕೂ ಸಾಗಿದ ನಿನ್ನ ಹರಿವು
ಕಾಲದ ಕೈಮೀರಿದ ಅವಳ ವಾತ್ಸಲ್ಯದಂತೆ
ಅಮಿತ, ಅನಂತ, ಅವಿಶ್ರಾಂತ, ಅನವರತ...

3 comments:

  1. ಅಲ್ಲವಾ,,,,? ಎಷ್ಟು ಕಲ್ಮಶಗಳು...... ಎಷ್ಟೋ ಕಾರ್ಖಾನೆಗಳ ಮಲಿನಗಳ ನಡುವೆಯೂ ಅವಳೊಂದು ಗಂಗೆ ಮಾತ್ರ... ಅಮಿತ, ಅನಂತ, ಅವಿಶ್ರಾಂತ, ಅನವರತ..

    ಒಳ್ಳೆಯ ಕವನ.....

    ReplyDelete
  2. ವಾತ್ಸಲ್ಯಮಯಿ ಅವಳು.. ಆದರೆ ಎಷ್ಟಂತ ದೌರ್ಜನ್ಯ ಸಹಿಸಿಯಾಳು? ಕವನ ಭಾವ ಮೂಡಿಸುವಲ್ಲಿ ಗೆಲುವು ಪಡೆದಿದೆ. ಹಾಗೇ ಪ್ರಕೃತಿಯ ಮೇಲೆ ಮಾನವನ ಕ್ರೂರತನ.. ಅದರ ಪರಿಣಾಮ ನಿರಪರಾಧಿಯೂ ಅನುಭವಿಸಬೇಕೆಂದು ಮಾತ್ರ ಕ್ಲೇಶ ಕೊಡುತ್ತದೆ. ಆದರೆ ಇದು ಅವನ ನಿಯಮ. ಅದ ಒಪ್ಪಲೇ ಬೇಕು. ಒಂದು ಘಳಿಗೆ ಹನಿ ತುಂಬಿ ಎಲ್ಲರ ರಕ್ಷಿಸಪ್ಪಾ ಎಂದು ಬೇಡಿಕೊಳ್ಳುವುದನ್ನು ಮಾತ್ರ ಮಾಡಬಹುದು.

    ReplyDelete