ಕಣ್ಣಾಮುಚ್ಚಾಲೆಯಾಟ; ಬಚ್ಚಿಟ್ಟುಕೊಂಡ, ಅರಸಹೊರಟ ಭಾವಗಳಸ್ಪಷ್ಟ..
ಕಣ್ಮುಚ್ಚಿ, ಬಿಟ್ಟು, "ಬಿಟ್ಟೇ ಬಿಟ್ಟೇ" ಅಂದದ್ದು ನೀನೆಂಬುದಷ್ಟೇ ದಿಟ
-----------------------ಕಣ್ಮುಚ್ಚಿ, ಬಿಟ್ಟು, "ಬಿಟ್ಟೇ ಬಿಟ್ಟೇ" ಅಂದದ್ದು ನೀನೆಂಬುದಷ್ಟೇ ದಿಟ
ಹಾಗೇ ಸುಮ್ಮನೆ... ಅವನನೊಮ್ಮೆ ಕೇಳಿದೆ- "ನಾ ನಿನಗೇನು?"
ಕಣ್ಣಲಿ ಕಣ್ಣ ನೆಟ್ಟು ಕೇಳಿದ- "ಇನ್ನೇನಾನಾದರೂ ಕಂಡಿತೇನು?!"
-----------------------------------
ಚಂದ್ರ ಅಣಕಿಸುತ್ತಿರುವಂತಿದೆ
"ನನ್ನ ಬೆಳಗುವುದವನ ಛವಿ ಅಂದೆಯಲ್ಲಾ, ನಿನ್ನ ಕತೆಯಿನ್ನೇನು".. ಅಂದನೇ?!
-----------------------------------------------
ತಳದ ತೂತು ಲೆಕ್ಕಕಿರಲಿಲ್ಲ ನೋಡು, ತುಂಬಿಸುತಲೇ ನಡೆದಿದ್ದೆ,
ಕುಂಭದ್ರೋಣ ಮಳೆಯ ಭರವಸೆಯಿತ್ತು, ಅಕಾಲ ಬರದ ಸುಳಿವೆಲ್ಲಿತ್ತು?!
No comments:
Post a Comment