Monday, June 17, 2013

ನಾಲ್ಕೇನು ನೂರು ಮಾತು ಹುಟ್ಟಿಯಾವು,
ಅಕ್ಷರ ತಾಗಿದ ಮನವೆಂದೂ ಬಂಜೆಯಾಗುಳಿಯದು.
ಫಲಿತಕ್ರಿಯೆ ವೈಫಲ್ಯವೋ, ದಿನತುಂಬದ ಹೆರಿಗೆಯೋ

ಅಲ್ಲ; ನನ್ನೊಡಲೇ ದುರ್ಬಲ
ಪೋಷಿಸಿ, ಸಬಲಗೊಳಿಸಿ ಎದುರಿಡಲಾಗಲಿಲ್ಲ
ಬರಹವಾಗುವ ಮಾತು ಹೆರಲಾಗಲಿಲ್ಲ...

4 comments:

  1. ಬರಹಗಾರರ ಪಾಡು ಇದಲ್ಲವೇ Anuradha P Samaga ಅವರೇ,

    ReplyDelete
  2. ಇಲ್ಲ, ಅನು ನಿಮ್ಮ ಸೃಜನಶೀಲ ಗರ್ಭದಿಂದ ಬಂದ ಮಾತುಗಳೆಲ್ಲ ಬರಹಗಳೇ ಆಗಿವೆ. ಮುದಗೊಳಿಸಿದರೊಮ್ಮೆ, ಗಹನವಾಗಿ ಯೋಚಿಸುವಂತೆ ಮತ್ತೊಮ್ಮೆ, ಮುಗುಳುನಗೆ ಹರಿಸುವುದು ಮಗದೊಮ್ಮೆ.. ಅಂತೂ ಮೆಚ್ಚಿಸುವುದರಲ್ಲಿ ಹಿಂದೆ ಬೀಳುವುದಿಲ್ಲವೆಂದರೆ ಉತ್ಪ್ರೇಕ್ಷೆಯಲ್ಲ ಖಂಡಿತ.

    ReplyDelete
    Replies
    1. "ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣಹನಿಗಳೆ ಕಾಣಿಕೆ" ಅಂತ ಹಾಡು ಇರೋದು, ಆದ್ರೆ ಅವುಗಳಿಗೆ ನನ್ನಲ್ಲೇ ತುಂಬಾ ಬರ ಇದೆ, ಹಾಗಾಗಿ ಏನು ಕಾಣಿಕೆ ಕೊಡಲಿ ನೀನೇ ಹೇಳು ...

      Delete