ಆ ಮನೆಯ ಗೋಡೆಯ ಮಣ್ಣು
ಇದರ ಸಿಮೆಂಟ್ ಕಲ್ಲಿನದು
ಆ ಜಗಳ ಪೆಟ್ಟು ಹೊಡೆತ
ಈ ಹುಸಿಮುನಿಸು, ಸರಸ
ಆ ದಾರಿದ್ರ್ಯ ನಿರ್ಗತಿಕತನ
ಈ ತುಳುಕುವ ತಿಜೋರಿ
ಆ ಬಿರಿದ ಹೊಟ್ಟೆಯ ತೇಗು
ಈ ಹಸಿವ ಆಕ್ರಂದನಗಳು
ಭೂತಾಯಿಯೊಂದು ಮಗ್ಗುಲಲಿ
ಯಾವುದೇ ಫರಕಿಲ್ಲದೆ
ಹರಿದ ಪ್ರವಾಹದ ರಭಸದಲ್ಲಿ
ಒಂದರೊಳಗೊಂದು ಸೇರಿ ಹರಿದುಹೋದವು.
ಆ ಮನದ ಕೋರಿಕೆ ಇದರ ಉಪೇಕ್ಷೆ,
ಅಲ್ಲಿನ ಸ್ನೇಹ ಇಲ್ಲಿನ ಮೋಸ
ಆ ನಂಬಿಕೆ ಇಲ್ಲಿನ ದ್ರೋಹ
ಅಲ್ಲಿನ ಪ್ರೀತಿ ಇಲ್ಲಿನ ಸ್ವಾರ್ಥ
ಆ ಚೆಲುವು ಅಲ್ಲಿರದ ಒಲವು
ಸತ್ಯ ಮತ್ತದರ ಸೋಲು
ಸೌಂದರ್ಯ, ಕಿತ್ತೆಸೆಯುವ ಕ್ರೌರ್ಯಗಳೂ
ಭುಗಿಲೆದ್ದ ಪ್ರಕೃತಿಯಾಕ್ರೋಶದ
ಹೊರಹರಿವಲಿ ಕೊಚ್ಚಿಹೋಗಿರಬಹುದೇ?!
ಈ ರಭಸ ತಗ್ಗಿ, ಮತ್ತೆ ಪ್ರಕೃತಿ
ಅಭಯದಾತೆ ಸುಂದರಿಯಾಗಿ
ಕಾಣಲಿರುವ ಆ ನಸುಕ ನವೋದಯ
ಅಸಮಾನತೆ-ಅತೃಪ್ತಿ ನುಂಗಿದ
ಪಾರಮ್ಯದ ಬೆಳಕು-ಬಿಸಿಲ ತಂದೀತೆ?
ಇದರ ಸಿಮೆಂಟ್ ಕಲ್ಲಿನದು
ಆ ಜಗಳ ಪೆಟ್ಟು ಹೊಡೆತ
ಈ ಹುಸಿಮುನಿಸು, ಸರಸ
ಆ ದಾರಿದ್ರ್ಯ ನಿರ್ಗತಿಕತನ
ಈ ತುಳುಕುವ ತಿಜೋರಿ
ಆ ಬಿರಿದ ಹೊಟ್ಟೆಯ ತೇಗು
ಈ ಹಸಿವ ಆಕ್ರಂದನಗಳು
ಭೂತಾಯಿಯೊಂದು ಮಗ್ಗುಲಲಿ
ಯಾವುದೇ ಫರಕಿಲ್ಲದೆ
ಹರಿದ ಪ್ರವಾಹದ ರಭಸದಲ್ಲಿ
ಒಂದರೊಳಗೊಂದು ಸೇರಿ ಹರಿದುಹೋದವು.
ಆ ಮನದ ಕೋರಿಕೆ ಇದರ ಉಪೇಕ್ಷೆ,
ಅಲ್ಲಿನ ಸ್ನೇಹ ಇಲ್ಲಿನ ಮೋಸ
ಆ ನಂಬಿಕೆ ಇಲ್ಲಿನ ದ್ರೋಹ
ಅಲ್ಲಿನ ಪ್ರೀತಿ ಇಲ್ಲಿನ ಸ್ವಾರ್ಥ
ಆ ಚೆಲುವು ಅಲ್ಲಿರದ ಒಲವು
ಸತ್ಯ ಮತ್ತದರ ಸೋಲು
ಸೌಂದರ್ಯ, ಕಿತ್ತೆಸೆಯುವ ಕ್ರೌರ್ಯಗಳೂ
ಭುಗಿಲೆದ್ದ ಪ್ರಕೃತಿಯಾಕ್ರೋಶದ
ಹೊರಹರಿವಲಿ ಕೊಚ್ಚಿಹೋಗಿರಬಹುದೇ?!
ಈ ರಭಸ ತಗ್ಗಿ, ಮತ್ತೆ ಪ್ರಕೃತಿ
ಅಭಯದಾತೆ ಸುಂದರಿಯಾಗಿ
ಕಾಣಲಿರುವ ಆ ನಸುಕ ನವೋದಯ
ಅಸಮಾನತೆ-ಅತೃಪ್ತಿ ನುಂಗಿದ
ಪಾರಮ್ಯದ ಬೆಳಕು-ಬಿಸಿಲ ತಂದೀತೆ?
[ಆ ಬಿರಿದ ಹೊಟ್ಟೆಯ ತೇಗು
ReplyDelete=
ಈ ಹಸಿವ ಆಕ್ರಂದನಗಳು ]
+
[ಆ ದಾರಿದ್ರ್ಯ ನಿರ್ಗತಿಕತನ
=
ಈ ತುಳುಕುವ ತಿಜೋರಿ ]
ಒಟ್ಟಾರೆ ಸೇರಿಸಿ ಸಮತೂಕವಾಗಿಸಿ
ಈ ಕಲಿಯ ರಾಜ್ಯದಲಿ ನ್ಯಾಯವಿದು ನೋಡು...
ಅಲ್ಲಿನ ಸ್ನೇಹ ಇಲ್ಲಿನ ಮೋಸ
ಆ ನಂಬಿಕೆ ಇಲ್ಲಿನ ದ್ರೋಹ
ಹೇಗೆ ಬಿಡಿಸುವುದು ಹೇಳು ಅಸಮಾನತೆ ಜೀಡು...
ಇವೆಲ್ಲವುಗಳ ನಡುವೆಯೂ ಚಿಗುರಲಿ ಆಸೆಯ ಕುಡಿ....
ಚಂದ....
hoom... it has to.
Deleteಮಾಡಿದ್ದನ್ನು ಮುಕ್ಕಿಯೇ ಬಿಡಬೇಕು. ಮತ್ತೆ ಹೊಸತನದ ಬೆಳವಣಿಗೆ.. ಹೀಗೆ ಬಂಡಿ ಸಾಗುತ್ತಲೇ ಇರುತ್ತದೆ.. ಸುಂದರವಾಗಿದೆ
ReplyDeleteಧನ್ಯವಾದಗಳು ಶ್ರೀಕಾಂತ್ ಅವರೇ....
Delete