Wednesday, June 5, 2013

ನಿಶೆ ರವಿಯ ವಿರಹಕುದುರಿಸಿದ ಕಂಬನಿಯೋ,
ಉಷೆ ಮಿಂದು ಕೇಶವುದುರಿಸಿದ ಹನಿಯೋ,
ಇನ ಬರಲು ಇಳೆ ನಾಚಿ ಬೆವತುದೋ,
ಮಳೆ ಪಳೆಯುಳಿಕೆಯುಳಿಸಿ ಹೋದುದೋ
ಎಳೆಬಿಸಿಲಲಿ ಎಲೆಎಲೆ ಹೊತ್ತ ಇಬ್ಬನಿ
ರವಿಕಿರಣ ಸೆಳೆದು ಸೆರೆ ಮಾಡಿಟ್ಟ ಪರಿ
ಬಿಳಿ ಬಯಲಾಗಿದೆ ನೀರಹನಿ ಬೆಳಕಕಣ ಮಿಲನದಲಿ
ಮೈ ಮರೆತಿದೆ ನಿರ್ವರ್ಣ ಸಪ್ತವರ್ಣವಾದ ಬೆರಗಲಿ


No comments:

Post a Comment