ಶಶಿಗೊಮ್ಮೊಮ್ಮೆ ರವಿಯ ಸಾಮೀಪ್ಯದಾಸೆ
ಹಗಲಲೂ ಕದ್ದು ಮೂಡುವುದುಂಟು
ನೆರಳಂಥ ಬಲು ತೆಳು ಅಸ್ತಿತ್ವದಲಿ
ಇತ್ತದ್ದವನೇ ಗುರುತು
ಧರಿಸಿದ್ದವನದೇ ಹೊಳಪು
ಹೊರೆ ಸ್ಮರಿಸಿ ಎರಗಲಿಕಾದರೂ
ಬರುವೆನೆಂದರೆ ಧಗಧಗನುರಿಯುತಾನೆ
ನಿರಾಕರಿಸುತಲೇ ಪ್ರಕಾಶಿಸಿ
ಕಳೆಗೆಡಿಸಿ ಮುಖಮುರಿಯುತಾನೆ.
"ಇದ್ದೂ ಕಾಣದಿರುವಂತಿರುವುದಾದರಿರು
ಹೊಳಪು, ಆಕಾರ, ಕೊನೆಗಿರುವೇ ಇಲ್ಲದೆ.
ನೀನಿರುವೆಡೆ ನಾ ನಿರಾಳನಲ್ಲ,
ನಾ ಬೆಳಗುವೆಡೆ ನೀನಿರುವುದು ಸಲ್ಲ"
"ಬರಲೇ" ಅನ್ನುತಳುಕುವ ಇವಗೆ ಅವನುತ್ತರ..
ಚಂದ್ರ ಬೆಪ್ಪಾಗಿ ಸಪ್ಪಗಾಗುತಾನೆ
ಬೆಳಕನೇ ಬೆಳಗಿಸುವ ಸೂರ್ಯನ ನೇರ ನೋಡುವ
ತಂಪಷ್ಟೆ ಅಲ್ಲ, ಉರಿಯನೂ ಹೊರುವ
ಆಸೆ ಹತ್ತಿಕ್ಕಿ ಹಿಂತಿರುಗುತಾನೆ.
ಅವಗಿವನು ಬೇಕಿಲ್ಲ, ಇವಗವನ ಸನಿಹದ ಋಣವಿಲ್ಲ.
ಹ್ಮೂಂ, ಬೇಕಿಲ್ಲದ ಮೇಲೆ ಅವನಲ್ಲಿ ಇರುವ ಹಾಗಿಲ್ಲ.
ReplyDeleteಹೌದಲ್ಲವೆ, ಮೊದಲಬಾರಿಗೆ ಭಾನುವಿನ ಮೇಲೆ ಕೋಪ ಬಂತು.
ಹೌದಾ..ಪಾಪ ಭಾನು..haa haa...
Delete