Friday, June 28, 2013

ನಿಶೆಯ ಸಾಮೀಪ್ಯಕೆ ಹಾತೊರೆದು
ಬೆಳಕಿಗೂ ಅವಳಿಗೂ ದೂರವೆಂದರಿಯದೆ
ಗಂಟೆಗಳೆಷ್ಟೋ ಬಿರುಬೆಳಕಿನಡಿ
ಅಲೆದಾಡಿ ಸೋತು ಬಳಲಿದ
ಹಗಲ ಕೈಹಿಡಿದು ಸರಿದಾರಿಗೊಯ್ದು
ಅವಳ ಸುಪರ್ದಿಗವನನೊಪ್ಪಿಸಿದ
ಸಾರ್ಥಕ ಸಂಜೆ...


3 comments:

  1. ವಾರೇವ್ಹಾ ಮತ್ತೊಂದು ಸಂಜೆ ಚಿತ್ರ...

    ReplyDelete
  2. ಸಂಜೆಯ ಸಾರ್ಥಕತೆಯಲ್ಲಿ, ಕನಸು ಮತ್ತು ನೆನಪುಗಳನ್ನು ಮೊಳೆಯಿಸುವುದರಲ್ಲಿ :) ಚೆನ್ನಾಗಿದೆ ಈ ಹನಿ ಅನಕ್ಕ.

    - ಪ್ರಸಾದ್.ಡಿ.ವಿ.

    ReplyDelete
  3. ಹೀಗಾಗಲಿ ಅಂತ ಬಯಸಿದವುಗಳ ಚಿತ್ರಣ ಬೇಗ ಮನಸಲ್ಲಿ ಪಡಿಮೂಡುತ್ತವೆ, ನನ್ನ ಆಶಾವಾದ ಮತ್ತು ಆಶಯಗಳು ಅಲೆದಾಡುತ್ತಿರುವವರು, ಕಳಕೊಂಡವರು, ಹಾತೊರೆಯುತ್ತಿರುವವರೆಲ್ಲರ ಜೊತೆಗೂ ಇದೆ ಪ್ರಸಾದ್.

    ಧನ್ಯವಾದ ಪ್ರಸಾದ್ ಮತ್ತು ಬದರಿ ಸರ್.

    ReplyDelete