Wednesday, June 19, 2013

ಮಾತು ಕೇಳಿ ಮನವನಳೆಯಲು ಬೇಕಾದ್ದು ನನಲಿಲ್ಲ ಸ್ನೇಹವೇ...
ನಿನ್ನೆಯಷ್ಟೇ ಗೇಣನು ಮೊಳವೆಂದಳೆದ ಆ ಮಾಪಕವನ್ನೆಸೆದು ಬಿಟ್ಟೆ...
------------------------------------------
ಸರಾಗ ಹರಿಯುವ ನೀರಿಗೆ ಮರುಭೂಮಿಯ ಕಳ್ಳಿ ಹೂವರಳಿಸುವಾಸೆ
ಮರುಭೂಮಿಗೆ ಮೃಗತೃಷ್ಣೆಯಾಗಿ ನೀರೊಂದು ಕೈಗೆಟುಕದ ಕನಸು.
-------------------------------------------
ಕಲಿಯಬೇಕು ಈ ಅಕ್ಷರಗಳಿಂದ ಒದಗುವ ಪಾಠ
ಖುಶಿಗೊದಗುವಲ್ಲೂ ಕೊರಗಿಗೊದಗಿದಷ್ಟೇ ಪ್ರಾಮಾಣಿಕತೆ...
-------------------------
ಇಲ್ಲದುದರ ಘನತೆ ಸಾರಹೊರಟವಗೆ ಗೆಲುವು ತಂದಿತ್ತದ್ದು
ಇದ್ದುದು ಎದುರಿದ್ದೂ ಕಾಣದ ಕುರುಡು

1 comment:

  1. ಎಲ್ಲ ಸಾಲುಗಳೂ ಚೆನ್ನಾಗಿವೆ
    ಆದರೆ ಎರಡನೆಯದು ತುಂಬಾ ಇಷ್ಟವಾಯಿತು

    ReplyDelete