Tuesday, June 18, 2013

ಇವು ಹೀಗೆ, ಅವ ಹಾಗೆ....

ದಾರಿಬದಿ ಹೊಂಡದ ಕೊಚ್ಚೆನೀರು
ತೇಲುವ ಕಾಗದದ ಪುಟ್ಟ ದೋಣಿ
ಹುಟ್ಟು, ಪಯಣಿಗ, ಗುರು, ಗುರಿ ಬೇಕಿಲ್ಲ,
ತನದೇ ದಾರಿ, ತಾನಲ್ಲದೇನೂ ಅರಿವಿಲ್ಲ.

ಚಂದದೊಂದು ಹಜಾರದ ಮೂಲೆ
ಅರಳಿಯೇ ಇರುವ ಬಣ್ಣದ ಸದಾಪುಷ್ಪ
ಮೊಗ್ಗಿಂದರಳುವ, ಮುದುಡುವ, ಗಂಧದ ತಿಳಿವಿಲ್ಲ
ಅರಳಿದ ನಿರ್ಜೀವ ಬಾಳುವೆ ಬಿಟ್ಟೇನೂ ಗೊತ್ತಿಲ್ಲ.

ಬಯಲುರಂಗ, ಜಗ ವೀಕ್ಷಿಸುವಾಟ
ಆಡುತಲೇ ಪ್ರಶ್ನೆಯಾಗುಳಿವ ಪೋಷಕ ಪಾತ್ರ
ಐದಂಗ ಮತ್ತೊಂದು ಮನಸಿದ್ದರೂ ಅರಿತುದೇನಿಲ್ಲ
ನೋವುಂಡು ನೋವೀವುದಷ್ಟೇ.. ಬೇರೇನಿಲ್ಲ.



4 comments:

  1. ಮಾರ್ಮಿಕವಾಗಿದೆ! ಪ್ರತಿಯೊಂದು ಪಾತ್ರವೂ ಹೀಗೇ ಅಲ್ಲವಾ... ನೋವುಂಡು ನೋವೀವುದು!!
    ಅನು, ಬಹಳ ಗಂಭೀರ ಕವನ!

    ReplyDelete
  2. ಹೋಲಿಕೆಗಳನ್ನು ಕೊಡುತ್ತಲೇ, ಬದುಕಿನ ವೈರುಧ್ಯಗಳನ್ನು ಅರಿತುಕೊಳ್ಳುವ ಪರಿಯನ್ನು ಹೇಳಿಕೊಡುವ ಪುಟ್ಟ ಕವನ.

    ReplyDelete
  3. ನೋಡುವ ಮನಸ್ಸಿದ್ದರೆ ಪಂಚ ಅಂಗಗಳು ಬೇಕಾದಷ್ಟು ಎನ್ನುವ ಸಂದೇಶ ಹೊತ್ತ ಕವನಗಳ ಸಾಲು ಸುಂದರವಾಗಿದೆ

    ReplyDelete