Monday, June 17, 2013

ಸುಮ್ಮನೆ ತಿರುಗಿದೆ ಭಾವಬುಗುರಿ, ವೇಗ ಕ್ಷಯಿಸಿ ನಿಲ್ಲುವ ಕ್ಷಣ ಕ್ಷಿತಿಜದಲ್ಲಿ
ಹೌದು ಇಲ್ಲ ಪೋಣಿಸಿದ ಮಾಲೆ ಕತ್ತ ಸುತ್ತಿ ಬೀಸಿ ಎಸೆದ ಭ್ರಮಣದಲ್ಲಿ..
ತಲೆಸುತ್ತಿ ಬವಳಿ ಬಂದರೂ ನಿರುಕಿಸುತಲೇ ಇರುವ ನಾನು..
ಅದರದೇ ದ್ವಂದ್ವ ನನದು; ಸಮಾನ ದುಃಖಿಗಳು ನಾವು.
-------------------------
ಒಗಟನೆಸೆದು ಸವಾಲೊಡ್ಡುವ ಹೊತ್ತು ಸರಿಯಿರಲಿಲ್ಲ
ಬಿಡಿಸುವಾತನ ಮನಕಾಗಲೇ ಮೋಡಿಯ ಬೀಗ ಜಡಿದಿತ್ತು.
-----------------------------------
ಕೊನೆ ಸಾರುವ ನಡೆಗೆ ದಾರಿದೀಪವಾಗುವ ಕರ್ತವ್ಯ.
ಹಗಲ ಪಾಳಿ ಸೂರ್ಯನದು, ರಾತ್ರಿ ಚಂದ್ರನದು



2 comments:

  1. ಮೂರು ಹನಿಗಳೂ ಒಳ್ಳೆಯ 3 ಕವನಗಳಿಗೆ ಯಾಕೆ ಬುನಾದಿಯಾಗಬಾರದು?

    ReplyDelete
    Replies
    1. ಖಂಡಿತಾ ಸರ್, ಆಗಿಯೇ ಬಿಡಲಿ..

      Delete