Tuesday, June 11, 2013

ಮುಸಲಧಾರೆಯೂ ನಿರಂತರ ತುಂತುರೂ
ಹೊಸತುಡಲು ಮಣ್ಣನೊಲಿಸಿದಂತೆ ಕಲ್ಲನೊಲಿಸಲಾಗಲಿಲ್ಲ
ಕಲ್ಲು... ಒಳಗಿಳಿಯಗೊಡದೆಂದು ಕೈ ಚೆಲ್ಲಿದವು
ಒರಟು ಮೈಯ್ಯನೇ ಮುತ್ತಿಕ್ಕಿ ಮೆದು ಪಾಚಿ ಒಳಗಿಳಿಯದೆಯೂ
ನಗ್ನ ಕಲ್ಲಿಗೆ ಪಚ್ಚೆಯುಡಿಸಿಯೇ ಬಿಟ್ಟಿತು.

2 comments:

  1. ಚೆನ್ನಾಗಿದೆ, ಆದರೆ ವಿಸ್ತರಿಸಿ ದೀರ್ಘ ಕವಿತೆಯಾಗುವ ಎಲ್ಲ ಲಕ್ಷಣಗಳೂ ಇದರಲ್ಲಿವೆ, ನೋಡಿ...

    ReplyDelete
  2. ಇಂಥಹ ಕಲ್ಪನೆಗಳೇ ಖುಷಿಕೊಡೋದು.....

    ಒರಟು ಮೈಯ್ಯನೇ ಮುತ್ತಿಕ್ಕಿ ಮೆದು ಪಾಚಿ ಒಳಗಿಳಿಯದೆಯೂ
    ನಗ್ನ ಕಲ್ಲಿಗೆ ಪಚ್ಚೆಯುಡಿಸಿಯೇ ಬಿಟ್ಟಿತು.

    ಸೂಪರ್.......

    ReplyDelete