Sunday, June 2, 2013

ಏಕೆ?!


ನಿದ್ರೆಗೂ ಎಚ್ಚರಕೂ ಕಣ್ಮುಚ್ಚಿ ತೆಗೆವಷ್ಟೇ ಅಂತರ,
ನಡುವೆ ನೋಡು ಏನೇನೆಲ್ಲಾ ಅವಾಂತರ!
ಹಾಲು ಮೊಸರಾಗಿದೆ, ಅನ್ನ ಹಳಸಾಗಿದೆ.
ಚಿಗುರು ಎಲೆಯಾಗಿ, ಮೊಗ್ಗು ಹೂವಾಗಿದೆ.
ಶಶಿಯಿಳಿದು ಆಕಾಶ ಭಾನುವಿನದಾಗಿದೆ.
ಕರಿಬಾನು ಬಿಳಿಯಾಗಿದೆ, ಕನಸು ಮುಗಿದಿದೆ.
ರಾತ್ರಿಯರಳಿದ್ದು ಮುದುಡಿದೆ, ಮುಚ್ಚಿದ್ದು ಅರಳಿದೆ..
ನಿನ್ನೆ ಇಂದಾಗಿದೆ, ತೇದಿ ಬದಲಾಗಿದೆ..
ಎಲ್ಲ ಸಹಜವೇ ಎನಿಸುವಾಗ ಅಲ್ಲೇ.. ,
ಅಲ್ಲೇ ಬಂಧ ಬದಲಾದರದು ಅಸಹಜವೇ?!
ಮನಸಿಗದೇ ಕಣ್ಣಲ್ಲವೇ,
ಶಾಂತವಾಗಿದ್ದಲ್ಲಿ ಇಲ್ಲಳುವುದೇಕೆ?!
ಭಾವದ್ದದೇ ಅರಿವಲ್ಲವೇ,
ಅಲ್ಲೊಪ್ಪಿದ್ದು ಇಲ್ಲೊಪ್ಪದೇಕೆ?!

2 comments:

  1. ಆಬ್ಬಾ ಕವಿ ಮನಸು ಎಷ್ಟು ಸೂಕ್ಷ್ಮ.. ಕಣ್ಮುಚ್ಚಿ ತೆಗೆಯುವುದಲ್ಲಿ ನಡೆಯುವ ಪ್ರಕೃತಿಯ ನಡೆಯನ್ನು ಎಷ್ಟು ಚೆನ್ನಾಗಿ ಪೋಣಿಸಿದಿ ಅಕ್ಷರ ಮಾಲೆಯಲಿ ಅನು.
    ಸರಳ ಭಗವದ್ಗೀತೆ!!! ಯಾರನ್ನೂ ಸುಮ್ಮ್ ಸುಮ್ಮನೆ ಮೆಚ್ಚಿಸಿ ಅವರ ಹೃದಯದಲ್ಲಿ ಸ್ಥಾನ ಪಡೆಯುವ ಹುನ್ನಾರವಿಲ್ಲ ಈ ಮನದಲ್ಲಿ. ಒಳ್ಳೆಯದು ಯಾವಾಗಲೂ ಒಳ್ಳೆಯದೇ.. ಮತ್ತು ಅದನ್ನು ಮೆಚ್ಚಿ ಕೂಡಲೇ ಪ್ರತಿಕ್ರಿಯೆ ಕೊಡುವ ಮನಸೂ ಇರಬೇಕು.. ಪ್ರತಿಫಲದ ನಿರೀಕ್ಷೆಯಿಲ್ಲದೆ. ಇದು ನನಗಿದೆ. ಹಾಗಂತ ನಾನೇನು ದೊಡ್ಡ ತ್ಯಾಗಿಯಲ್ಲ, ಸನ್ಯಾಸಿಯೂ ಅಲ್ಲ. ನನ್ನ ಬರಹಗಳಿಗೆ ಚಿತ್ರಗಳಿಗೆ ನಿನ್ನ ಸ್ಪಂದನದ ನಿರೀಕ್ಷೆ ಇದ್ದೇ ಇದೆ..ತಪ್ಪಾಗಿದ್ದರೆ ಅದನ್ನು ತಿದ್ದಿ ಮಾರ್ಗದರ್ಶನ ಮಾಡುವ ಹಕ್ಕನಂತೂ ನಾನು ನಿನಗೆ ಕೊಟ್ಟಿದ್ದೇನೆ ಅನು. ಇಲ್ಲಿ ವಯಸ್ಸು ಗೌಣ್ಯ.. ತಿದ್ದಲು, ತಿದ್ದಿಕೊಳ್ಳಲು ಮುಖ್ಯವಾಗಿ ಬೇಕು ಮನಸು.. ಅದು ನನ್ನಲ್ಲಿದೆ!

    ReplyDelete